ಧಾರಾಕಾರ ಮಳೆ ಆರೆಂಜ್ ಅಲರ್ಟ್ ಕಾಮನಬಿಲ್ಲು ಮಂಗಳೂರಿನ ಇಂದಿನ ಸ್ಪೆಷಲ್

ಮಂಗಳೂರು ಅಗಸ್ಟ್ 26: ಕರಾವಳಿಯಲ್ಲಿ ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಭಾರಿ ಮಳೆ ಒಂದೆಡೆ ಇನ್ನೊಂದೆಡೆ ಹವಮಾನಾ ಇಲಾಖೆಯ ಭಾರಿ ಮಳೆ ಸಾಧ್ಯತೆ ಆರಂಜ್ ಅಲರ್ಟ್ ಇವೆರಡರ ಮಧ್ಯೆ ನಗರದಲ್ಲಿ ಕಾಣಿಸಿಕೊಂಡ ಕಾಮನಬಿಲ್ಲು ಪ್ರಕೃತಿ ವೈಶಿಷ್ಠ್ಯಕ್ಕೆ ಸಾಕ್ಷಿಯಾಯಿತು.
ಜಿಲ್ಲೆಯಲ್ಲಿ ಕಳೆದ ಮೂರು ದಿನಗಳು ಕೊಂಚ ಬಿಡುವ ಕೊಟ್ಟಿದ್ದ ಮಳೆರಾಯ ಇಂದು ಮತ್ತೆ ಆರ್ಭಟ ಶುರು ಮಾಡಿಕೊಂಡಿದ್ದಾನೆ. ಬೆಳಿಗ್ಗೆಯಿಂದಲೇ ಸುರಿಯುತ್ತಿರುವ ಧಾರಾಕಾರ ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.

ಇಂದು ಮುಂಜಾನೆಯಿಂದ ಬರೀ ಮಳೆ ನೋಡುತ್ತಿದ್ದ ಮಂಗಳೂರಿನ ವಾತಾವರಣದಲ್ಲಿ ಮಧ್ಯಾಹ್ನದ ವೇಳೆ ಬಣ್ಣದ ಚಿತ್ತಾರ ಕಂಡು ಬಂದಿದೆ‌. ಹೌದು ಆಕಾಶದ ತುಂಬಾ ಕಾಮನಬಿಲ್ಲು ಹರಡುವ ಮೂಲಕ ಏಳು ಬಣ್ಣಗಳ ಕಾಮನಬಿಲ್ಲು ಎಲ್ಲರ ಮನಸೂರೆಗೊಂಡಿತ್ತು.

ಕೇವಲ ಕೆಲವೇ ನಿಮಿಷಗಳಲ್ಲಿ ಮೋಡದ ಮರೆಯಲ್ಲಿ ಮರೆಯಾಗಿ, ಮತ್ತೆ ಕಾರ್ಮೋಡ ಆವರಿಸಿತು. ವಾತಾವರಣದಲ್ಲಿ ನೀರಿನ ಅಂಶ ಹೆಚ್ಚಾಗಿರುವ ಸಂದರ್ಭದಲ್ಲಿ ಸೂರ್ಯನ ಕಿರಣಗಳು ನೀರಿನ ಹನಿಗಳ ಮೂಲಕ ಹಾದುಹೋಗುವ ಸಂದರ್ಭದಲ್ಲಿ ಆಕಾಶದಲ್ಲಿ ಈ ರೀತಿಯ ಅಪರೂಪದ ಕಾಮನ ಬಿಲ್ಲು ಕಾಣ ಸಿಗುತ್ತವೆ. ಮಳೆಗೆ ತತ್ತರಿಸಿದ ಮಂಗಳೂರು ಜನತೆ ಕಾಮನಬಿಲ್ಲು ನೋಡಿ ಸಂತಸ ಪಟ್ಟರು.

VIDEO

Facebook Comments

comments