Connect with us

    DAKSHINA KANNADA

    ಆಳ್ವಾಸ್ ವಿಧ್ಯಾಸಂಸ್ಥೆ ವಿಧ್ಯಾರ್ಥಿನಿ ರಚನಾ ಆತ್ಮಹತ್ಯೆ ಬಗ್ಗೆ ಪೋಷಕರ ಅನುಮಾನ

    ಆಳ್ವಾಸ್ ವಿಧ್ಯಾಸಂಸ್ಥೆ ವಿಧ್ಯಾರ್ಥಿನಿ ರಚನಾ ಆತ್ಮಹತ್ಯೆ ಬಗ್ಗೆ ಪೋಷಕರ ಅನುಮಾನ

    ಮಂಗಳೂರು ಜನವರಿ 26: ಮೂಡಬಿದಿರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆ ಆಳ್ವಾಸ್ ನ ವಿದ್ಯಾರ್ಥಿನಿ ರಚನಾ ಆತ್ಮಹತ್ಯೆ ಸುತ್ತ ಈಗ ಅನುಮಾನಗಳು ಉಂಟಾಗಿದ್ದು, ರಚನಾ ಪೋಷಕರು ಆತ್ಮಹತ್ಯೆ ಪ್ರಕರಣದ ಕುರಿತು ಅನುಮಾನ ವ್ಯಕ್ತಪಡಿಸಿದ್ದಾರೆ.

    ಆಳ್ವಾಸ್ ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ  ಚಿತ್ರದುರ್ಗ ಮೂಲದ ರಚನಾ ಮಂಜುನಾಥ್ ನಿನ್ನೆ  5ನೇ ಮಹಡಿ ಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ವರದಿಯಾಗಿತ್ತು. ಆಳ್ವಾಸ್ ಕಾಲೇಜಿನ ಕಟ್ಟಡದ ಮೇಲಿಂದ ಬಿದ್ದು ವಿದ್ಯಾರ್ಥಿನಿ ಸಾವಿಗೀಡಾಗಿರುವ ಸುತ್ತ ಇದೀಗ ಹಲವು ಅನುಮಾನಗಳ ಹುತ್ತ ಬೆಳೆದುಕೊಂಡಿದೆ.

    ಪ್ರತೀ ವರ್ಷ ಆಳ್ವಾಸ್ ಒಂದಲ್ಲ, ಒಂದು ವಿದ್ಯಾರ್ಥಿಗಳು ಆತ್ಮಹತ್ಯೆಯ ಹೆಸರಿನಲ್ಲಿ ಸಾವಿಗೀಡಾಗುತ್ತಾರೆ. ಆದರೆ, ಕಾವ್ಯ ಪೂಜಾರಿ ಪ್ರಕರಣ ಮಾತ್ರ ಗಂಭೀರತೆಯನ್ನು ಪಡೆದುಕೊಂಡಿದ್ದರೂ ಕೊನೆಗೂ ಪೂರ್ಣವಿರಾಮ ಮಾತ್ರ ಕಂಡಿರಲಿಲ್ಲ. ಆದರೆ, ಮತ್ತೆ ಆಳ್ವಾಸ್ ನಲ್ಲಿ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಕಲಿಯುತ್ತಿದ್ದ  ರಚನಾ ಮಂಜುನಾಥ್ ನಿನ್ನೆ  5ನೇ ಮಹಡಿ ಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ರಚನಾ ತನ್ನ ಡೆತ್ ನೋಟ್ ನಲ್ಲಿ ಪರೀಕ್ಷೆ ಯಲ್ಲಿ ಅಂಕ ಕಡಿಮೆ ಬಂದಿರುವ  ಬಗ್ಗೆ ಹಾಗೂ ತನಗೆ ಕ್ಯಾನ್ಸರ್ ಇರುವ ಬಗ್ಗೆ ಬರೆದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಉಲ್ಲೇಖಿಸಿದ್ದಳು.

    ಆದರೆ ರಚನಾ ಪೋಷಕರು ಹೇಳುವ ಪ್ರಕಾರ, ಆಕೆಗೆ ಯಾವುದೇ ಅನಾರೋಗ್ಯವಿರಲಿಲ್ಲ. ಕುಟುಂಬದ  ವೈದ್ಯರಿಗೆ ಕೂಡಾ ಆಕೆಯ ಬಗ್ಗೆ ತಿಳಿದಿದ್ದು, ಒಂದು ವೇಳೆ ಆಕೆಗೆ ಅನಾರೋಗ್ಯವಿದ್ದಿದ್ದರೆ ಕುಟುಂಬದ  ವೈದ್ಯರಿಗೆ ಮಾಹಿತಿಯಿರುತ್ತಿತ್ತು. ಮತ್ತು ಆಕೆಯ ಮಾರ್ಕ್ಸ್ ಬಗ್ಗೆ ನಮ್ಮಿಂದ ಯಾವುದೇ ಒತ್ತಡ ಇರಲಿಲ್ಲ ಎಂದು ಪೊಷಕರು ತಿಳಿಸಿದ್ದಾರೆ. ಅಲ್ಲದೆ ಡೆತ್ ನೋಟ್ ನಲ್ಲಿರುವ ಕೈ ಬರಹ ಆಕೆಯದಲ್ಲ ಎಂಬ ಸಂಶಯವನ್ನು ಪೊಷಕರು ವ್ಯಕ್ತಪಡಿಸಿದ್ದಾರೆ.

    ಆದರೆ ಇಲ್ಲಿ ಪೋಷಕರು ಎತ್ತಿರುವ ಬಲವಾದ ಪ್ರಶ್ನೆಯೆಂದರೆ, ಒಂದು ವೇಳೆ ರಚನಾ 5ನೇ ಮಹಡಿಯಿಂದ ಬಿದ್ದಿರುವುದೇ ಆಗಿದ್ದರೆ ಆಕೆಯ ತಲೆ, ಕೈ-ಕಾಲು ಅಥವಾ ದೇಹದ ಇತರ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು, ಮೂಳೆ ಮುರಿತವುಂಟಾಗಬೇಕಿತ್ತು. ಆದರೆ, ಆಕೆಯ ಮೈಯಲ್ಲಿ ಯಾವುದೇ ತರಚಿದ ಗಾಯಕೂಡಾ ಇಲ್ಲವೆಂಬುದು ಪೋಷಕರಿಗೆ ಅನುಮಾನ ಮೂಡಿಸಿರುವ ಪ್ರಮುಖ ಅಂಶ ವಾಗಿದೆ.

    ಪ್ರಕರಣದ ಸಂಬಂಧಿಸಿ ಸಾಕಷ್ಟು ಅನುಮಾನ ಗಳನ್ನು ಹೊಂದಿರುವ ರಚನಾ ಕುಟುಂಬಸ್ಥರು ಈ ಪ್ರಕರಣವನ್ನು ಸಚಿವರಾದ ಆಂಜನೇಯಪ್ಪ, ಯು.ಟಿ. ಖಾದರ್ ಅವರ ಗಮನಕ್ಕೂ ತಂದಿದ್ದಾರೆ. ಪ್ರಕರಣ ಸಂಬಂಧಿಸಿ ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸುವಂತೆ ರಚನಾ ಪೊಷಕರು  ಆಗ್ರಹಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply