ವಾಣಿಜ್ಯ ವಿಷಯದಲ್ಲಿ ಮೂಡಬಿದಿರೆ ಆಳ್ವಾಸ್ ಕಾಲೇಜಿನ ಅನ್ಸಿಲ್ಲಾ ಡಿಸೋಜಾ ರಾಜ್ಯಕ್ಕೆ ಪ್ರಥಮ

ಮಂಗಳೂರು ಎಪ್ರಿಲ್ 15: ಮೂಡಬಿದಿರೆ ಆಳ್ವಾಸ ಶಿಕ್ಷಣ ಸಂಸ್ಥೆಯ ದ್ವಿತೀಯ ಪಿಯುಸಿ ವಿಧ್ಯಾರ್ಥಿನಿ ಒಲಿವಿಟಾ ಅನ್ಸಿಲ್ಲಾ ಡಿಸೋಜಾ ವಾಣಿಜ್ಯ ವಿಷಯದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾಳೆ.

ಇಂದು ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು ಎಂದಿನಂತೆ ಬಾಲಕೀಯರು ಮೇಲುಗೈ ಸಾಧಿಸಿದ್ದಾರೆ. ಪಿಯು ಬೋರ್ಡ್ ನಲ್ಲಿ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್ ಮತ್ತು ಪಿಯುಸಿ ಬೋರ್ಡ್ ನಿರ್ದೇಶಕಿ ಶಿಖಾ ಅವರು ಫಲಿತಾಂಶವನ್ನು ಪ್ರಕಟಿಸಿದರು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಉತ್ತಮ ಸಾಧನೆ ನಿರ್ಮಿಸಿದ್ದು ಉಡುಪಿ ಮೊದಲ ಸ್ಥಾನ ಪಡೆದರೆ, ದಕ್ಷಿಣ ಕನ್ನಡ ದ್ವಿತೀಯ ಸ್ಥಾನವನ್ನು ಪಡೆದಿದೆ. ಈ ವರ್ಷ ಒಟ್ಟು ಶೇ.61.73 ಫಲಿತಾಂಶ ದಾಖಲಾಗಿದ್ದು, ಒಟ್ಟು 4,14,587 ಮಂದಿ ಪಾಸ್ ಆಗಿದ್ದಾರೆ.

ದ್ವಿತಿಯ ಪಿಯುಸಿಯ ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡದ ಮೂಡಬಿದ್ರೆಯ ಆಳ್ವಾಸ್ ಪಿಯು ಕಾಲೇಜಿನ ವಿದ್ಯಾರ್ಥಿನಿ ಒಲ್ವಿಟಾ ಎನ್ಸಿಲ್ಲಾ ಡಿಸೋಜಾ ಅವರು 596 ಅಂಕ ಪಡೆದು ಮೊದಲ ಸ್ಥಾನಗಳಿಸಿದ್ದಾರೆ.

‘ಆಳ್ವಾಸ್ ಶಿಕ್ಷ ಸಂಸ್ಥೆ ಮತ್ತು ಸಂಸ್ಥೆಯ ಶಿಕ್ಷಕರು, ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಅವರ ಪ್ರೋತ್ಸಾಹವೇ ಈ ಸಾಧನೆಗೆ ಕಾರಣ’ ಎಂದರು. 596 ಅಂಕ ಗಳಿಸಲು ಶಿಕ್ಷಕರ ಮಾರ್ಗದರ್ಶನವೇ ಕಾರಣ. ಮುಂದೆ ಸಿಎ (ಚಾರ್ಟಡ್‌ ಅಕೌಂಟೆಂಟ್) ಮಾಡಬೇಕು ಎಂದುಕೊಂಡಿದ್ದೇನೆ.

ಸದ್ಯಕ್ಕೆ ಸಿಪಿಟಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡುತ್ತಿದ್ದೇನೆ ಎಂದರು. ಶ್ರಮವಹಿಸಿ ಓದುವುದು ಮತ್ತು ಅಂದಿನ ಪಾಠಗಳಿಗೆ ಅಂದೇ ಗಮನ ಕೊಟ್ಟು ಅರ್ಥ ಮಾಡಿಕೊಳ್ಳುವುದು ಮುಖ್ಯ. ರಜೆಯಲ್ಲಿಯೂ ನಾನು ಓದುತ್ತಿದ್ದೆ ಎಂದು ಓದಿನ ಬಗ್ಗೆ ಹೇಳಿಕೊಂಡರು.

VIDEO