ಜಾರ್ಖಂಡ್ ಫೆಬ್ರವರಿ 23: ಇಬ್ಬರು ಸಿಬ್ಬಂದಿ ಸಹಿತ 7 ಮಂದಿ ಪ್ರಯಾಣಿಕರಿಂದ ಚಾರ್ಟರ್ ವಿಮಾನವೊಂದು ಪತನವಾದ ಘಟನೆ ಜಾರ್ಖಂಡ್ ನಲ್ಲಿ ನಡೆದಿದೆ.

ಪತನವಾದ ವಿಮಾನ ಏರ್ ಆಂಬ್ಯುಲೆನ್ಸ್ ಆಗಿದ್ದು, ಸೋಮವಾರ ರಾಂಚಿ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆದ ಸ್ವಲ್ಪ ಸಮಯದ ನಂತರ ಜಾರ್ಖಂಡ್‌ನ ಸಿಮಾರಿಯಾ ಬಳಿ ಪತನಗೊಂಡಿದೆ. ದೆಹಲಿಗೆ ತೆರಳುತ್ತಿದ್ದ ವಿಮಾನವು ರಾಡಾರ್‌ನಿಂದ ಕಣ್ಮರೆಯಾಯಿತು ಎಂದು ಈ ಹಿಂದೆ ವರದಿಯಾಗಿತ್ತು. ರಾಂಚಿ ವಿಮಾನ ನಿಲ್ದಾಣದ ನಿರ್ದೇಶಕರ ಪ್ರಕಾರ, ವಿಮಾನವು ಏರ್ ಆಂಬ್ಯುಲೆನ್ಸ್ ಆಗಿತ್ತು. ಅದು ನಿಗದಿತ ಸಮಯಕ್ಕೆ ಟೆರ್ ಆಫ್ ಆಗಿತ್ತು. ಆದರೆ ಸ್ವಲ್ಪ ಸಮಯದ ಬಳಿಕ ಅದು ವಿಮಾನ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಳೆದುಕೊಂಡಿತ್ತು.
VT-AJV ಎಂದು ನೋಂದಾಯಿಸಲಾದ ಈ ವಿಮಾನವು ರೆಡ್‌ಬರ್ಡ್ ಏರ್‌ವೇಸ್ ಪ್ರೈ. ಲಿಮಿಟೆಡ್ ನಿರ್ವಹಿಸುವ ಬೀಚ್‌ಕ್ರಾಫ್ಟ್ ಕಿಂಗ್ ಏರ್ BE9L ಆಗಿತ್ತು. ಇದರಲ್ಲಿ ಏಳು ಜನರು, ಒಬ್ಬ ರೋಗಿ, ಒಬ್ಬ ವೈದ್ಯರು, ಒಬ್ಬ ಅರೆವೈದ್ಯಕೀಯ ಸಿಬ್ಬಂದಿ, ಇಬ್ಬರು ಸಹಾಯಕರು, ಒಬ್ಬ ಪೈಲಟ್-ಇನ್-ಕಮಾಂಡ್ ಮತ್ತು ಒಬ್ಬ ಸಹ-ಪೈಲಟ್ ಇದ್ದರು. ಜಿಲ್ಲಾಡಳಿತದ ಶೋಧ ಮತ್ತು ರಕ್ಷಣಾ ತಂಡವು ಅಪಘಾತದ ಸ್ಥಳಕ್ಕೆ ತಲುಪಿದ್ದು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.



