Connect with us

    LATEST NEWS

    ಆಗ್ರಾ : ಶಾಲಾ ಶಿಕ್ಷಕಿಯ ಸ್ನಾನದ ನಗ್ನ ವಿಡಿಯೋ ಮಾಡಿ ಲೈಂಗಿಕ ಕ್ರಿಯೆಗೆ ಒತ್ತಾಯಿಸಿದ ಅಪ್ರಾಪ್ತ ವಿದ್ಯಾರ್ಥಿಗಳು..!

    ಆಗ್ರಾ : ತಮ್ಮ ಕ್ಲಾಸ್ ಟೀಚರ್ ಸ್ನಾನಗೃಹದಲ್ಲಿ ಸ್ನಾನ ಮಾಡುತ್ತಿದ್ದಾಗ ರಹಸ್ಯವಾಗಿ ವಿಡಿಯೋ ಮಾಡಿ, ಲೈಂಗಿಕ ಕ್ರಿಯೆಗೆ ಸಹಕರಿಸುವಂತೆ ಬೆದರಿಕೆ ಹಾಕಿದ 10 ನೇ ತರಗತಿಯ ವಿದ್ಯಾರ್ಥಿ ಸೇರಿ ನಾಲ್ವರು  ಅಪ್ರಾಪ್ತ ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಮಥುರಾದಲ್ಲಿ ಪೊಲೀಸರು ಬಂಧಿಸಿದ್ದಾರೆ.

    ಆಗ್ರಾ ಮೂಲದ ಶಿಕ್ಷಕಿ ಉತ್ತರ ಪ್ರದೇಶದ ಮಥುರಾದ ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದು ರಜೆ ಸಮಯದಲ್ಲಿ ಸರಿಯಾಗಿ ಓದದ ವಿದ್ಯಾರ್ಥಿಗಳನ್ನು ಕರೆಸಿ ಟ್ಯೂಷನ್ ಕೊಡಿಸಲು ಯತ್ನಿಸಿದ್ದಾರೆ. ಈ ಸಂದರ್ಭ ಶಿಕ್ಷಕಿ ಸ್ನಾನ ಮಾಡುತ್ತಿದ್ದಾಗ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್‌ನಲ್ಲಿ ಸ್ನಾನದ ವಿಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾನೆ. ನಂತರ ಶಿಕ್ಷಕಿಗೆ ಲೈಂಗಿಕ ಕ್ರಿಯೆಗೆ ಆಹ್ವಾನಿಸಿ ಸಹಕರಿಸದಿದ್ದರೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಘಟನೆ ಬಳಿಕ  ಶಿಕ್ಷಕಿ ವಿದ್ಯಾರ್ಥಿಯೊಂದಿಗೆ ಮಾತನಾಡುವುದನ್ನು ತಪ್ಪಿಸಿದ್ದಾರೆ. ಇದರಿಂದ ಕೋಪಗೊಂಡ ವಿದ್ಯಾರ್ಥಿ ಇತರ ಸ್ನೇಹಿತರಿಗೆ ಈ  ವಿಡಿಯೋ ಕಳುಹಿಸಿದ್ದಾನೆ.  ಶಿಕ್ಷಕಿಯ ಅಶ್ಲೀಲ ವೀಡಿಯೊವನ್ನು ಉಳಿದ ಮೂವರು ಅಪ್ರಾಪ್ತರು ವಾಟ್ಸಾಪ್ ಮತ್ತು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಇದರಿಂದ ಮನನೊಂದ ಶಿಕ್ಷಕಿ ಆತ್ಮಹತ್ಯೆಗೆ ವಿಫಲ ಯತ್ನ ಮಾಡಿ ಮಿಷನ್ ಶಕ್ತಿ ಅಭಿಯಾನ ಕೇಂದ್ರದಲ್ಲಿ ಸಹಾಯ ಕೇಳಿದ್ದಾರೆ ಬಳಿಕ ಅವರ ನೆರವಿನಲ್ಲಿ ದೂರು ದಾಖಲಿಸಲಾಗಿ ಶಿಕ್ಷಕಿಯ ದೂರಿನ ಮೇರೆಗೆ ಪೊಲೀಸರು ನಾಲ್ವರು ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಬಂಧಿಸಿದ್ದಾರೆ.

    ಈ ಬಗ್ಗೆ ಮಾಹಿತಿ ನೀಡಿರುವ ಮಥುರಾ ಡಿಸಿಪಿ ಸೂರಜ್ ರಾಯ್ ಶಿಕ್ಷಕಿ ಮತ್ತು ಓರ್ವ ವಿದ್ಯಾರ್ಥಿ ಅನೋನ್ಯವಾಗಿದ್ದರು.ಅವನು ರಹಸ್ಯವಾಗಿ ತನ್ನ ಮೊಬೈಲ್ ಫೋನ್‌ನಲ್ಲಿ ಅವಳ ಅಶ್ಲೀಲ ವೀಡಿಯೊವನ್ನು ರೆಕಾರ್ಡ್ ಮಾಡಿದನು ಮತ್ತು ನಂತರ ಅವಳನ್ನು ಬ್ಲ್ಯಾಕ್‌ಮೇಲ್ ಮಾಡಲು ದೃಶ್ಯಗಳನ್ನು ಬಳಸಿದ್ದಾನೆ.ಶಿಕ್ಷಕಿ ಅವನೊಂದಿಗೆ ಸಂಬಂಧವನ್ನು ಕಡಿದುಕೊಂಡಾಗ ಆತತನ್ನ ಮೂವರು ಸ್ನೇಹಿತರೊಂದಿಗೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾನೆ. ಆಕೆಯ ದೂರಿನ ಆಧಾರದ ಮೇಲೆ, BNS ಸೆಕ್ಷನ್‌ಗಳು 75 (ಲೈಂಗಿಕ ಕಿರುಕುಳ), 64 (ಅತ್ಯಾಚಾರ), 61 (2) (ಅಪರಾಧದ ಪಿತೂರಿ), 351 (2) (ಅಪರಾಧ ಬೆದರಿಕೆ), ಮತ್ತು IT ಕಾಯಿದೆಯ ಸೆಕ್ಷನ್ 67A ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. “ನ್ಯಾಯಾಲಯದ ಆದೇಶದ ಮೇರೆಗೆ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ನಮ್ಮ ತನಿಖೆ ಮುಂದುವರೆದಿದೆ” ಆರೋಪಿಗಳಿಂದ ಆರು ಮೊಬೈಲ್ ಫೋನ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಡೇಟಾ ಮರುಪಡೆಯುವಿಕೆಗಾಗಿ ಸಾಧನಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವೀಡಿಯೊ ಮತ್ತು ಚಿತ್ರಗಳನ್ನು ಹಂಚಿಕೊಳ್ಳಲು ಬಳಸಿದ ಸಾಮಾಜಿಕ ಮಾಧ್ಯಮ ಪುಟವನ್ನು ಅಳಿಸಲಾಗಿದೆ ಎಂದಿದ್ದಾರೆ

    Share Information
    Advertisement
    Click to comment

    You must be logged in to post a comment Login

    Leave a Reply