Connect with us

LATEST NEWS

ಚಂಡಮಾರುತಗಳ ಹಾವಳಿ ನಂತರ ಮತ್ತೆ ಕಡಲಿಗೆ ಇಳಿದ ಮೀನುಗಾರಿಕಾ ಬೋಟ್ ಗಳು

ಚಂಡಮಾರುತಗಳ ಹಾವಳಿ ನಂತರ ಮತ್ತೆ ಕಡಲಿಗೆ ಇಳಿದ ಮೀನುಗಾರಿಕಾ ಬೋಟ್ ಗಳು

ಮಂಗಳೂರು ನವೆಂಬರ್ 5: ಕಳೆದ 15 ದಿನಗಳಿಂದ ಎರಡು ಚಂಡಮಾರುತಗಳಿಂದ ಸಂಪೂರ್ಣ ಸ್ತಬ್ದವಾಗಿದ್ದ ಮೀನುಗಾರಿಕೆ ಈಗ ಪುನಃ ಆರಂಭಾಗಿದೆ. ಕಡಲು ಶಾಂತವಾಗಿರುವ ಹಿನ್ನಲೆಯಲ್ಲಿ ಮಂಗಳೂರು,ಮಲ್ಪೆ ಬಂದರುಗಳಲ್ಲಿ ಮೀನುಗಾರಿಕಾ ಬೋಟ್ ಗಳು ಸಮುದ್ರಕ್ಕಿಳಿಯಲಾರಂಭಿಸಿವೆ.

ಮಳೆಗಾಲದ ಮೀನುಗಾರಿಕಾ ರಜೆಯ ನಂತರವೂ ಸುರಿದ ಮಳೆಯಿಂದಾಗಿ ಈ ಬಾರಿಯ ಮೀನುಗಾರಿಕಾ ಋತು ತಡವಾಗಿ ಆರಂಭವಾಗಿತ್ತು. ಇನ್ನೇನು ಮೀನುಗಾರಿಕಾ ಆರಂಭವಾಗಿ ಮೀನುಗಳು ಬರಲಾರಂಭಿಸಿದ ಸಂದರ್ಭ ಕಾರ್ಗಿಲ್ ಮೀನುಗಳ ಹಾವಳಿ ಮೀನುಗಾರರ ನಿದ್ದೆಗೆಡಿಸಿತ್ತು. ಕಾರ್ಗಿಲ್ ಮೀನು ಹಾವಳಿ ಕಡಿಮೆಯಾಗುತ್ತಲೇ ಕರಾವಳಿಗೆ ಎರಡೆರಡು ಚಂಡಮಾರುತಗಳು ಆಗಮಿಸಿ ಮೀನುಗಾರರನ್ನು ಕಡಲಿಗೆ ಇಳಿಯದಂತೆ ಮಾಡಿದ್ದವು.

ಅರಬ್ಬೀ ಸಮುದ್ರದಲ್ಲಿನ ವಾಯುಭಾರ ಕುಸಿತ ‘ಕ್ಯಾರ್’ ಹಾಗೂ ‘ಮಹಾ’ ಚಂಡಮಾರುತವಾಗಿ ಕರಾವಳಿಗೆ ಅಪ್ಪಳಿಸಿದ್ದವು, ಮೊದಲು ಪ್ರಾರಂಭವಾದ ಕ್ಯಾರ್ ಚಂಡಮಾರುತ ಕಡಲಲ್ಲಿ ಮೀನುಗಾರಿಕೆಗೆ ತೆರಳಿದ್ದ ಮೀನುಗಾರರನ್ನು ವಾಪಾಸ್ ದಡಕ್ಕೆ ಬರದ ಹಾಗೆ ಮಾಡಿತ್ತು. ಕೆಲವು ಮೀನುಗಾರರು ಪ್ರಾಣ ಒತ್ತೆ ಇಟ್ಟು ವಾಪಾಸ್ ಬರಬೇಕಾದ ಪ್ರಸಂಗವೂ ಬಂದಿತ್ತು. ಲಕ್ಷಾಂತರ ರೂಪಾಯಿ ಹಣ ಖರ್ಚು ಮಾಡಿ ಮೀನುಗಾರಿಕೆಗೆ ತೆರಳಿದ್ದ ಬೋಟ್ ಗಳು ಬರಿ ಕೈಯಲ್ಲಿ ವಾಪಾಸ್ ಆಗಿದ್ದವು.

ನಂತರ ಬಂದ ಮಹಾ ಚಂಡಮಾರುತ ಅಷ್ಟೇನು ಪ್ರಭಾವ ಬೀರಿಲ್ಲವಾದರೂ ಹವಮಾನ ಇಲಾಖೆ ಹಾಗೂ ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ಮೀನುಗಾರರನ್ನು ಕಡಲಿಗೆ ಇಳಿಯದಂತೆ ತಡೆದಿದ್ದರು. ಈಗ ಚಂಡಮಾರುತಗಳ ಪ್ರಭಾವ ಕಡಿಮೆಯಾಗಿದ್ದರಿಂದ ಮತ್ತೆ ಮೀನುಗಾರಿಕಾ ಬೋಟ್ ಗಳು ಸಮುದ್ರಕ್ಕೆ ಮೀನುಗಾರಿಕೆಗೆ ಹೊರಟಿವೆ.

ಮಂಗಳೂರಿನಲ್ಲಿ ಶೇಕಡ 80 ರಷ್ಟು ಬೋಟ್ ಗಳು ಸಮುದ್ರದಲ್ಲಿ ಮೀನುಗಾರಿಕೆಯಲ್ಲಿ ತೊಡಗಿಕೊಂಡಿವೆ. ಮಲ್ಪೆಯಲ್ಲೂ ಕೂಡ ಶೇಕಡ 40 ರಷ್ಟು ಮೀನುಗಾರಿಕಾ ಬೋಟ್ ಗಳು ಸಮುದ್ರಕ್ಕೆ ಇಳಿದಿದೆ. ಆದರೆ ಸೈಕ್ಲೋನ್ ನಿಂದ ಸ್ತಬ್ದವಾಗಿದ್ದ ಮೀನುಗಾರಿಕೆ ಆರಂಭವಾಗುತ್ತಿದ್ದಂತೆ ಮತ್ತೊಂದು ಚಂಡಮಾರುತದ ಸೂಚನೆಯನ್ನು ಹವಮಾನ ಇಲಾಖೆ ನೀಡಿದ್ದು, ನೆವಂಬರ್ 6 ಮತ್ತು 7 ರಂದು ಕಡಲು ಪ್ರಕ್ಷುಬ್ದಗೊಳ್ಳುವ ಸೂಚನೆ ನೀಡಿದ್ದು ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದ್ದಾರೆ.

Facebook Comments

comments