DAKSHINA KANNADA
‘ಕಾಂತಾರ,ದ ಬಳಿಕ ದೈವರಾಧಕರ ಕೆಂಗಣ್ಣಿಗೆ ಗುರಿಯಾದ ‘ಕಲ್ಜಿಗ’,ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನ..!
ನಟ ಅರ್ಜುನ್ ಕಾಪಿಕಾಡ್ ಅವರು ಈ ಹಿಂದೆ ಹಲವು ತುಳು ಸಿನಿಮಾಗಳಲ್ಲಿ ನಟಿಸಿದ್ದಾರೆ.
ಜನಪ್ರಿಯ ನಟ ದೇವದಾಸ್ ಕಪಿಕಾಡ್ ಅವರ ಪುತ್ರ ಅರ್ಜುನ್ ಕಾಪಿಕಾಡ್ ಅವರನ್ನು ದೊಡ್ಡಮಟ್ಟದಲ್ಲಿ ಕನ್ನಡ ಇಂಡಸ್ಟ್ರಿಗೆ ಪರಿಚಯಿಸುವ ಉದ್ದೇಶದಿಂದ ಕಲ್ಜಿಗ ಚಿತ್ರ ತಯಾರಾಗಿತ್ತು. ಆದರೆ ಚಿತ್ರಕ್ಕೆ ಬಿಡುಗಡೆಯಾದ ಕೂಡಲೇ ಕರಾವಳಿಯಲ್ಲೇ ವಿರೋಧ ವ್ಯಕ್ತವಾಗಿದೆ.
ಸಿನಿಮಾದಲ್ಲಿ ಕೊರಗಜ್ಜ ದೈವದ ಅನುಕರಣೆ ಮಾಡಿ ಚಿತ್ರೀಕರಣ ಮಾಡಿರುವುದಕ್ಕೆ ದೈವರಾಧಕರ ಅಸಮಾಧಾನಕ್ಕೆ ಕಾರಣವಾಗಿದೆ. ಚಿತ್ರದ ವಿರುದ್ಧ ಕಾನೂನು ಹೋರಾಟ ನಡೆಸುವುದಕ್ಕೂ ನಿರ್ಧಾರ ಮಾಡಲಾಗಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನ ಆರಂಭಗೊಂಡಿದೆ.
You must be logged in to post a comment Login