ಪಾಕಿಸ್ತಾನದ ಪ್ರತಿದಾಳಿ ಸಾಧ್ಯತೆ ಕರಾವಳಿಯಾದ್ಯಂತ ಹೈ ಅಲರ್ಟ್ ಘೋಷಣೆ

ಮಂಗಳೂರು ಫೆಬ್ರವರಿ 27: ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಭಾರತ ಪಾಕಿಸ್ತಾನದ ಭೂಬಾಗಕ್ಕೆ ಪ್ರವೇಶಿಸಿ ದಾಳಿ ನಡೆಸಿ, ಉಗ್ರರನ್ನು ಸದೆ ಬಡಿದಿದ್ದು, ಈ ಹಿನ್ನಲೆಯಲ್ಲಿ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ಪ್ರತಿದಾಳಿ ನಡೆಸುವ ಸಾಧ್ಯತೆ ಇರುವ ಹಿನ್ನೆಯಲ್ಲಿ ಕರಾವಳಿಯದ್ದಕ್ಕೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ.

ಪಾಕಿಸ್ತಾನ ಹಗೆ ತೀರಿಸಲು ಉಗ್ರರನ್ನು ಬಳಸಿ ಪ್ರತಿದಾಳಿ ನಡೆಸುವ ಸಾಧ್ಯತೆ ಇದೆ ಎನ್ನಲಾಗಿದೆ. ಆದ್ದರಿಂದ ಕರಾವಳಿಯಲ್ಲಿ ನೌಕ ದಳ, ಕೋಸ್ಟ್ ಗಾರ್ಡ್, ಕೋಸ್ಟಲ್ ಪೊಲೀಸರನ್ನು ಹೈ ಅಲರ್ಟ್ ಮಾಡಲಾಗಿದೆ.

ರಾಜ್ಯದ ಕರಾವಳಿ ಪ್ರದೇಶಗಳಾದ ಮಂಗಳೂರು, ಉಡುಪಿ, ಉತ್ತರಕನ್ನಡದ ಕಾರವಾರದಲ್ಲೂ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಕಾರವಾರದ ಸೀಬರ್ಡ್ ಕದಂಬ ನೌಕಾನೆಲೆಯಲ್ಲೂ ಪ್ರಥಮ ಹಂತದ ಹೈ ಅಲರ್ಟ್ ಘೋಷಣೆ ಮಾಡಲಾಗಿದೆ. ಆಳಸಮುದ್ರದಲ್ಲಿ ನಡೆಯುವ ಚಟುವಟಿಕೆಗಳ ಹದ್ದಿನ ಕಣ್ಣಿಡಲಾಗುತ್ತಿದೆ.

ಸಮುದ್ರದಲ್ಲಿ ನೇವಿ, ಕೋಸ್ಟ್ ಗಾರ್ಡ್ ನಿಂದ ಕಟ್ಟೆಚ್ಚರ ವಹಿಸಲಾಗುತ್ತಿದ್ದ ಗಸ್ತು ಹೆಚ್ಚಿಸಲಾಗಿದೆ. ಸಮುದ್ರದಲ್ಲಿ ಗಸ್ತು ನಡೆಸಲು ಡಾರ್ನಿಯೆರ್ ವಿಮಾನ ಬಳಕೆ ಮಾಡಲಾಗುತ್ತಿದೆ.

ಸಮುದ್ರದಲ್ಲಿ ಸಂಚರಿಸುವ ಬೋಟ್ ಗಳ ಮೇಲೂ ನಿಗಾ ಇರಿಸಲಾಗಿದ್ದು ಸಂಶಯಾಸ್ಪದ ಹಡಗು, ದೋಣಿಗಳು ಕಂಡು ಬಂದಲ್ಲಿ ಮಾಹಿತಿ ನೀಡಲು ಮೀನುಗಾರರಿಗೆ ಸೂಚಿಸಲಾಗಿದೆ.

ನಗರ ಪಟ್ಟಣ ಪ್ರದೇಶಗಳಲ್ಲೂ ಸ್ಥಳೀಯ ಭದ್ರತಾ ಅಧಿಕಾರಿಗಳು ಅಲರ್ಟ್ ಮೇಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಪ್ರತಿಯೊಂದು ಪೊಲೀಸ್ ಠಾಣಾ ವ್ಯಾಪ್ತಿಯಲ್ಲೂ ಕಟ್ಟೆಚ್ಚರ ವಹಿಸಲು ಸೂಚಿಸಲಾಗಿದೆ. ಈ ಬಗ್ಗೆ ಹಿರಿಯ ಪೊಲಿಸ್ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ತಪಾಸಣಾ ಚೆಕ್ ಪೋಸ್ಟ್ ಗಳನ್ನು ನಿರ್ಮಾಣ ಮಾಡಲಾಗಿದೆ. ಜನರು ಹೆಚ್ಚಾಗಿ ಓಡಾಡುವ ರೈಲು ನಿಲ್ದಾಣ, ಏರ್ಪೋರ್ಟ್, ಮಾಲ್ ಗಳಲ್ಲಿ ಮಾರುಕಟ್ಟೆ ಇತರ ಸಾರ್ವಜನಿಕ ಪ್ರದೇಶದ ಮೇಲೆ ಹದ್ದಿನ ಕಣ್ಣು ಇರಿಸಲಾಗುತ್ತಿದೆ.

Facebook Comments

comments