ಹುಲಿ ಗಣತಿಯಲ್ಲಿ ದೇಶದಲ್ಲಿ ರಾಜ್ಯವನ್ನು ನಂಬರ್ 1 ಮಾಡಿದ ಪಿಲಿಕುಳದ ರಾಣಿ ಹುಲಿಯ 5 ಮರಿಗಳ ದತ್ತು ಸ್ವೀಕರಿಸಿದ ಉದ್ಯಮಿ

ಮಂಗಳೂರು ನವೆಂಬರ್ 16: ಹುಲಿ ಗಣತಿಯಲ್ಲಿ ದೇಶದಲ್ಲಿ ರಾಜ್ಯವನ್ನು ನಂಬರ್ 1 ಮಾಡಿದ ಪಿಲಿಕುಳದ ರಾಣಿ ಹುಲಿಯ 5 ಮರಿಗಳ ವಾಸ್ತವ್ಯದ ವ್ಯವಸ್ಥೆ ಅಭಿವೃದ್ಧಿಪಡಿಸಲು ಅಬುಧಾಬಿಯ ಪ್ರಸಿದ್ಧ ಉದ್ಯಮಿ ಮಂಗಳೂರಿನ ರಾಮದಾಸ ಕಾಮತ್ ಮತ್ತು ಅವರ ಪತ್ನಿ ಜಯಶ್ರೀ ಕಾಮತ್ 15 ಲಕ್ಷ ರೂ ದೇಣಿಗೆ ನೀಡಿದ್ದಾರೆ.

ಮೂಲತಃ ಮಂಗಳೂರಿನವರಾದ ರಾಮದಾಸ ಕಾಮತ್ ಮತ್ತು ಅವರ ಪತ್ನಿ ಜಯಶ್ರೀ ಕಾಮತ್ ಪಿಲಿಕುಳ ಉದ್ಯಾನದ ರಾಣಿ ಹೆಸರಿನ ಹುಲಿ ಜನ್ಮ ನೀಡಿದ ಐದು ಮರಿಗಳನ್ನು ದತ್ತು ಸ್ವೀಕರಿಸಿದ್ದು, ಅವರು ನೀಡಿರುವ ದೇಣಿಗೆ ಮೊತ್ತ ಉದ್ಯಾನದ ಅಭಿವೃದ್ದಿ ಕಾರ್ಯಗಳಿಗೆ ವಿನಿಯೋಗಿಸಲಾಗುವುದು ಮತ್ತು ಅವರು ಸೂಚಿಸಿದಂತೆ ಹುಲಿ ಮರಿಗಳಿಗೆ ಹೆಸರಿಡಲಾಗುವುದು ಎಂದು ಪಿಲಿಕುಳ ಜೈವಿಕ ಉದ್ಯಾನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ ತಿಳಿಸಿದ್ದಾರೆ.

Facebook Comments

comments