ಅಭಿಮಾನಿಗಳು ಕೊಟ್ಟ ಬಿರುದುಗಳನ್ನು ಟೀಕೆ ಮಾಡೋದು ಸರಿಯಲ್ಲ – ನಟಿ ಶೃತಿ

ಉಡುಪಿ ಎಪ್ರಿಲ್ 4: ಜಾತಿ ಆಧಾರದಲ್ಲಿ ರಾಜಕಾರಣ ಮಾಡಬಾರದು ಎಂದು ಹೇಳುವವರೆ ಇಂದು ಮಂಡ್ಯದಲ್ಲಿ ಜಾತಿ ಆಧಾರದಲ್ಲಿ ರಾಜಕೀಯ ಮಾಡುತ್ತಿದ್ದು ಇದು ಅವರಿಗೆ ಶೋಭೆ ತರುವಂತಹದ್ದಲ್ಲ ಎಂದು ಬಿಜೆಪಿ ಮುಖಂಡೆ ನಟಿ ಶೃತಿ ಹೇಳಿದ್ದಾರೆ.

ಉಡುಪಿಯಲ್ಲಿ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಪರ ಮತಯಾಚನೆ ನಡೆಸಿದ ಸಂದರ್ಭ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮಂಡ್ಯದಲ್ಲಿ‌ ಸುಮಲತಾ ಗೆಲುವು ಅನುಮಾನ ಇಲ್ಲ, ಇದು ನಂಬಿಕೆ ಅಲ್ಲ ಮಂಡ್ಯ‌ ಜನರ ಅಭಿಮಾನ‌ ಪ್ರೀತಿ ನೋಡಿದರೆ ಗೋತ್ತಾಗುತ್ತೆ ಎಂದು ಹೇಳಿದರು.

ಮೈತ್ರಿ ಪಕ್ಷದ ನಾಯಕರು ಸುಮಲತಾ ಅವರ ವೈಯಕ್ತಿಕ ಟೀಕೆ ಮಾಡೋದು ಸರಿಯಲ್ಲ. ನಟರಾದ ದರ್ಶನ್ ಮತ್ತು ಯಶ್ ಅವರ ಪ್ರಬುದ್ದತೆಯನ್ನು ಎಲ್ಲರೂ ಮೆಚ್ಬೇಕು, ಇಬ್ಬರ ಕುರಿತು ವೈಯ್ಯಕ್ತಿಕ ಟೀಕೆ, ಜಾತಿ ಬಗ್ಗೆ ಟೀಕೆ , ಅವರಿಗೆ ಇರುವ ಬಿರದುಗಳಾದ ಡಿ ಭಾಸ್ , ಚಾಲೆಂಜಿಂಗ್ ಸ್ಟಾರ್ ಅನ್ನೋದ್ರ ಬಗ್ಗೆ ಮಾತಾಡಿದರು ಆದರೆ ಇಬ್ಬರು ಎಲ್ಲಾ ಟೀಕೆಯನ್ನು ಇಬ್ಬರೂ ಪ್ರಬುದ್ದತೆಯಿಂದ ಸ್ವೀಕರಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಡ್ಯದ ಜನ ಎಲ್ಲವನ್ನೂ ಗಮನಿಸ್ತಾ ಇದಾರೆ, ಜನರ ಪ್ರೀತಿ ಅಭಿಮಾನ ದುಪ್ಪಟ್ಟಾಗಿರುವುದು ಗೊತ್ತಾಗ್ತ ಇದೆ ಎಂದು ಹೇಳಿದ ಅವರು ನಾಳೆ ನಿಖಿಲ್ ಕೂಡಾ ದೊಡ್ಡ ಸ್ಟಾರ್ ಆಗ್ಬೋದು, ಅವರಿಗೂ ನಾನಾ ಬಿರುದುಗಳು ಸಿಗ್ಬೋದು, ಅಭಿಮಾನಿಗಳು ಕೊಟ್ಟ ಬಿರುದುಗಳನ್ನು ಟೀಕೆ ಮಾಡೋದು ಸರಿಯಲ್ಲ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ವಿರೋಧ ವ್ಯಕ್ತಪಡಿಸಿದರು.