ಹೈದರಾಬಾದ್ ಸೆಪ್ಟೆಂಬರ್ 09: ಖ್ಯಾತ ನಟಿ ಕಾಜಲ್ ಅಗರ್ವಾಲ್ ಅಪಘಾತದಲ್ಲಿ ಸಾವನಪ್ಪಿದ್ದಾರೆ ಎಂಬ ಸುದ್ದಿ ವೈರಲ್ ಆಗಿದ್ದು, ಇದೀಗ ನಟಿ ಸ್ಪಷ್ಟನೆ ಕೊಟ್ಟಿದ್ದು, ನಾನು ಸುರಕ್ಷಿತವಾಗಿದ್ದೇನ ಎಂದು ಹೇಳಿದ್ದಾರೆ.
ನಟಿ ಕಾಜಲ್ ಅಗರ್ವಾರ್ ರಸ್ತೆ ಅಪಘಾತದಲ್ಲಿ ಅವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ವದಂತಿಗಳು ವೇಗವಾಗಿ ಹರಡುತ್ತಿದ್ದಂತೆ, ಅಭಿಮಾನಿಗಳು ಸಹ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಾರ್ಥನೆ ಮತ್ತು ಅಗರ್ವಾಲ್ ಅವರ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದರು.

“ನನಗೆ ರಸ್ತೆ ಅಪಘಾತವಾಗಿದ್ದು, ನಾನು ಇನ್ನಿಲ್ಲ ಎಂಬ ಆಧಾರರಹಿತ ಸುದ್ದಿ ಬಂದಿದೆ ಎಂದು ನನಗೆ ತಿಳಿಯಿತು. ಇದರಲ್ಲಿ ಯಾವುದೇ ಸತ್ಯವಿಲ್ಲ. ಅದನ್ನು ನೋಡಿ ನನಗೆ ತುಂಬಾ ಆಶ್ಚರ್ಯವಾಯಿತು. ದೇವರ ದಯೆಯಿಂದ, ನಾನು ತುಂಬಾ ಚೆನ್ನಾಗಿದ್ದೇನೆ. ನಾನು ಸುರಕ್ಷಿತವಾಗಿದ್ದೇನೆ. ಇಂತಹ ಸುಳ್ಳು ಸುದ್ದಿಗಳನ್ನು ನಂಬಬೇಡಿ ಎಂದು ನಾನು ವಿನಂತಿಸುತ್ತೇನೆ. ನೀವು ಅದನ್ನು ಯಾರಿಗೂ ಹರಡಬೇಡಿ ಎಂದು ನಾನು ಪ್ರಾರ್ಥಿಸುತ್ತೇನೆ. ನೀವು ಅಂತಹ ಸುದ್ದಿಗಳಿಗಿಂತ ಸಕಾರಾತ್ಮಕತೆ ಮತ್ತು ಸತ್ಯದ ಮೇಲೆ ಗಮನಹರಿಸಬೇಕೆಂದು ನಾನು ಬಯಸುತ್ತೇನೆ. ಪ್ರೀತಿಯಿಂದ, ನಿಮ್ಮ ಕಾಜಲ್,” ನಾಯಕಿ ಪೋಸ್ಟ್ ಮಾಡಿದ್ದಾರೆ.



