Connect with us

    FILM

    ಆ್ಯಕ್ಷನ್‌ ಹಿರೋ ಬಿಜು ವಿಲನ್ ಎನ್ ಡಿ ಪ್ರಸಾದ್ ಆತ್ಮಹತ್ಯೆಗೆ ಶರಣು

    ಕೇರಳ ಜೂನ್ 28: ಮಲೆಯಾಳಂ ಸಿನೆಮಾ ರಂಗದ ಖ್ಯಾತ ವಿಲನ್ ಎನ್ ಡಿ ಪ್ರಸಾದ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೆಲ ಸಮಯದಿಂದ ಖಿನ್ನತೆಗೆ ಒಳಗಾಗಿದ್ದ ಅವರು ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


    ಮಲೆಯಾಳಂ ಸಿನೆಮಾ ರಂಗದಲ್ಲಿ ಖಳನಾಯಕನ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದರು. 2016ರಲ್ಲಿ ಬಿಡುಗಡೆಯಾಗಿದ್ದ ‘ಆ್ಯಕ್ಷನ್‌ ಹಿರೋ ಬಿಜು‘ ಸಿನಿಮಾದಲ್ಲಿ ಅವರು ಖಳನ ಪಾತ್ರದಲ್ಲಿ ನಟಿಸಿದ್ದರು.

    ಈ ಸಿನಿಮಾ ಅವರಿಗೆ ಖ್ಯಾತಿ ತಂದುಕೊಟ್ಟಿತ್ತು. ಪತ್ನಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು. ಅವರಿಗೆ ಇಬ್ಬರು ಮಕ್ಕಳಿದ್ದಾರೆ. ಈ ಹಿಂದೆ ಡ್ರಗ್ಸ್‌ ಪ್ರಕರಣ ಸೇರಿದಂತೆ ಅವರ ಮೇಲೆ ಹಲವು ಪೊಲೀಸ್‌ ಪ್ರಕರಣಗಳು ಅವರ ಮೇಲೆ ದಾಖಲಾಗಿದ್ದವು.

    Share Information
    Advertisement
    Click to comment

    You must be logged in to post a comment Login

    Leave a Reply