Connect with us

    FILM

    ಕಬ್ಜ ಶೂಟಿಂಗ್​ ವೇಳೆ ನಟ ಉಪೇಂದ್ರ ತಲೆಗೆ ಬಿತ್ತು ರಾಡ್ ಏಟು..!?

    ಬೆಂಗಳೂರು, ಎಪ್ರಿಲ್ 03: ಬಹುನಿರೀಕ್ಷಿತ ಕಬ್ಜ ಚಿತ್ರದ ಶೂಟಿಂಗ್ ವೇಳೆ ನಟ ಉಪೇಂದ್ರ ಅವರಿಗೆ ಪೆಟ್ಟು ಬಿದ್ದಿರುವುದಾಗಿ ವರದಿಯಾಗಿದೆ. ಚಿತ್ರೀಕರಣದ ವೇಳೆ ಸಹ ನಟ ಬೀಸಿದ ರಾಡ್ ಅಚಾನಕ್​ ಆಗಿ ರಿಯಲ್ ಸ್ಟಾರ್ ಉಪೇಂದ್ರ ಅವರ ತಲೆಗೆ ಬಡಿದು ಏಟಾಗಿದೆ.

    ತಲೆಗೆ ಗಾಯವಾದರೂ ಅರ್ಧಕ್ಕೆ ಶೂಟಿಂಗ್ ನಿಲ್ಲಿಸದ ಉಪೇಂದ್ರ, ಶೂಟಿಂಗ್​ ಪೂರ್ಣಗೊಳಿಸುವ ಮೂಲಕ ಸಿನಿಮಾ ಮೇಲಿನ ತಮ್ಮ ಬದ್ಧತೆ ಮತ್ತು ಪ್ರೀತಿಯನ್ನು ಸಾಬೀತು ಮಾಡಿದರು. ಕಳೆದ ರಾತ್ರಿ ಮಿನರ್ವಮಿಲ್​ನಲ್ಲಿ ಯಿಲ್ ಮಾರ್ಕೆಟ್ ಸೆಟ್​ನಲ್ಲಿ ಕಬ್ಜ ಚಿತ್ರದ ಫೈಟಿಂಗ್ ದೃಶ್ಯ ಚಿತ್ರೀಕರಣದ ವೇಳೆ ಅವಘಡ ಸಂಭವಿಸಿತು. ಕಬ್ಜ ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿದ್ದು, ಆರ್ .ಚಂದ್ರು ಅವರು ನಿರ್ದೇಶಿಸುತ್ತಿದ್ದಾರೆ.

    ಸ್ಟಂಟ್ ಮಾಸ್ಟರ್ ರವಿವರ್ಮ ರವರ ನಿರ್ದೇಶನದಲ್ಲಿ ಸಾಹಸ ಚಿತ್ರೀಕರಣ ನಡೆಯುತ್ತಿತ್ತು. ಈ ಚಿತ್ರದಲ್ಲಿ ನಟ ಕಿಚ್ಚ ಸುದೀಪ್​ ಸಹ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆಂಬ ಸುದ್ದಿ ಈಗಾಗಲೇ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ದುಪ್ಪಟ್ಟಾಗಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply