ತೃಪ್ತಿ ದೇಸಾಯಿ ಸ್ತ್ರೀವಾದಿ ಸೋಗಿನಲ್ಲಿ ಶಬರಿಮಲೆಗೆ ಹೋಗಲು ಬಂದಿದ್ದಾರೆ – ಶೋಭಾ ಕರಂದ್ಲಾಜೆ

ಉಡುಪಿ ನವೆಂಬರ್ 16: ಶಬರಿಮಲೆ ಗೆ ಹೋಗಲು ಕೊಚ್ಚಿನ್ ಏರ್ ಪೋರ್ಟ್ ಗೆ ತೃಪ್ತಿ ದೇಸಾಯಿ ಬಂದಿಳಿದಿದ್ದಾರೆ. ಆದರೆ ತೃಪ್ತಿ ದೇಸಾಯಿ ಬಂದ ಸ್ಟೈಲ್ ಅಯ್ಯಪ್ಪ ಭಕ್ತೆಯಂತಿಲ್ಲ, ಅವರು ಸ್ತ್ರೀವಾದಿಯ ಸೋಗಿನಲ್ಲಿ ಬಂದಿದ್ದಾರೆ.

ಕೇವಲ ದೇಶದಲ್ಲಿ ಪ್ರಚಾರ ಗಿಟ್ಟಿಸಲು ಕೇರಳಕ್ಕೆ ಬಂದಿದ್ದಾರೆ. ಅಯ್ಯಪ್ಪನ ಭಕ್ತರಾಗಿ ತೃಪ್ತಿ ದೇಸಾಯಿ ಕೇರಳಕ್ಕೆ ಬಂದಿಲ್ಲ. ಇರುಮುಡಿ ಇಲ್ಲದೆ, ಉಪವಾಸ ವೃತ ಇಲ್ಲದೆ ತೃಪ್ತಿ ದೇಸಾಯಿ ಬಂದಿದ್ದಾರೆ.

ಆದರೆ ಸುಪ್ರೀಂ ಕೋರ್ಟ್ ಇರುಮುಡಿ ಇಲ್ಲದೆ, 41 ದಿನ ಉಪವಾಸ ಮಾಡದೆ ಬರಬಹುದು ಎಂದು ಕೋರ್ಟ್ ಹೇಳಿಲ್ಲ, ಕೇವಲ ಹಿಂದೂ ಧರ್ಮ ಅವಹೇಳನ ಮಾಡುವವರು ದೇಶದಲ್ಲಿ ಇದ್ದಾರೆ. ಇಷ್ಟು ವರ್ಷ ಸಹಿಸಿಕೊಂಡು ಬಂದಿದ್ದೇವೆ, ಶಬರಮಲೆ ದೇವಸ್ಥಾನದ ವಿಚಾರದ ಭಕ್ತರಿಗೆ, ಪಂದಳ ರಾಜ, ಅರ್ಚಕರಿಗೆ ಬಿಡಬೇಕು, ಸುಪ್ರೀಂ ಕೋರ್ಟ್ ಅಯ್ಯಪ್ಪ ಭಕ್ತರ ಭಾವನೆಗೆ ಬೆಲೆ ಕೊಡಬೇಕು ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

3 Shares

Facebook Comments

comments