ಮಂಗಳೂರು ಸೆಪ್ಟೆಂಬರ್ 24: ಸೌಜನ್ಯ ಪರ ಹೋರಾಟದಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿರುವ ಮಹೇಶ್ ಶೆಟ್ಟಿ ತಿಮರೋಡಿಯನ್ನು ದಕ್ಷಿಣಕನ್ನಡ ಜಿಲ್ಲೆಯಿಂದ ಗಡಿಪಾರಿಗೆ ಆದೇಶಿಸಲಾಗಿದೆ. ಅವರನ್ನು ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಲಾಗಿದ್ದು, ರಾಜಕೀಯ ನಾಯಕರನ್ನು ಕೀಳಾಗಿ ನಿಂದಿಸಿದ್ದೇ ಗಡೀಪಾರಿಗೆ ಕಾರಣವಾಯ್ತಾ?ಎಂದು ಹೇಳಲಾಗಿದ್ದು, ಗಡಿಪಾರಿನ ಆದೇಶದ ಪ್ರತಿಯಲ್ಲೂ ಉಲ್ಲೇಖವಾಗಿದೆ.


ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ದಕ್ಷಿಣಕನ್ನಡ ಜಿಲ್ಲೆಯಿಂದಲೇ ಒಂದು ವರ್ಷಗಳ ಕಾಲ ಗಡಿಪಾರು ಮಾಡಲಾಗಿದೆ. ಸುಮಾರು 30ಕ್ಕೂ ಅಧಿಕ ಪ್ರಕರಣ ದಾಖಲಾಗಿರುವ ಕಾರಣ ಹಾಗೂ ನೆಲದ ಕಾನೂನಿನ ಮೇಲೆ ಕಿಂಚಿತ್ತೂ ಗೌರವವಿಲ್ಲದೆ ನಡೆದುಕೊಳ್ಳುತ್ತಿದ್ದಾರೆ ಎಂದು ಆದೇಶದಲ್ಲಿ ತಿಳಿಸಿಲಾಗಿದೆ.


ಆದೇಶದಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮೇಲೆ 26 ಪ್ರಕರಣಗಳು ಈವರೆಗೂ ದಾಖಲಾಗಿರುತ್ತದೆ. ಗಡಿಪಾರು ಪ್ರಕ್ರಿಯೆಯು ಚಾಲ್ತಿಯಲ್ಲಿರುವ ಸಮಯದಲ್ಲೇ, ಇವರ ವಿರುದ್ಧ ಹೊಸದಾಗಿ 5 ಪ್ರಕರಣಗಳು ದಾಖಲಾಗಿರುತ್ತದೆ ಹಾಗೂ ದಿನಾಂಕ: 16-06-2023 ರಂದು ಸಿಬಿಐ ನ್ಯಾಯಾಲಯದಿಂದ ಧರ್ಮಸ್ಥಳ ಗ್ರಾಮದ ಸೌಜನ್ಯ ಕೇಸ್‌ನಲ್ಲಿ ಆರೋಪಿಯಾಗಿರುವ ನಂತೋಷ್ ಎಂಬಾತನನ್ನು ಮಾನ್ಯ ನ್ಯಾಯಾಲಯ ನಿರ್ದೋಷಿ ಎಂದು ತೀರ್ಪು ನೀಡಿದ ಬಳಿಕ ಸೌಜನ್ಯ ಕೊಲೆ ಪ್ರಕರಣದಲ್ಲಿ ಪ್ರತಿಭಟನೆ ಮತ್ತು ನ್ಯಾಯಕ್ಕಾಗಿ ಜಿಲ್ಲೆಯ ಹೊರಗಡೆ ಹೋರಾಟ ನಡೆಸುತ್ತಿದ್ದಾರೆ. ಬೆಳ್ತಂಗಡಿ ಠಾಣಾ ವ್ಯಾಪ್ತಿಯ ಪರಿಸರಗಳಲ್ಲಿ ಸಹಚರರೊಂದಿಗೆ ಸೇರಿಕೊಂಡು ಸಾರ್ವಜನಿಕ ಶಾಂತಿ ಭಂಗ ಕೃತ್ಯಗಳಲ್ಲಿ ತೊಡಗಿ ಸಾಮಾಜಿಕ ಸಾಮರಸ್ಯಕ್ಕೆ ತೊಡಕು ಉಂಟು ಮಾಡುವ ಸಾಧ್ಯತೆಯಿದ್ದು, ಈತನ ರೌಡಿ ಚಟುವಟಿಕೆಗಳನ್ನು ನಿಯಂತ್ರಿಸಲು ಬಿ ಎನ್ ಎಸ್ ಎಸ್ ಕಲಂ:126.135(3) ರಡಿಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಅಲ್ಲದೆ 2025 ನೇ ಇಸವಿಯಲ್ಲಿ ಸೌಜನ್ಯ ಪ್ರಕರಣದಲ್ಲಿ ಪ್ರತಿಭಟನೆ ಮಾಡುತ್ತಿರುವ ಕುರಿತು ಈತನ ಮೇಲೆ ಬಿ ಎನ್ ಎಸ್ ಎಸ್ ಕಲಂ:126,135(3)ಪಿ ಎಆರ್ ನಂಬ್ರ:39/2025 ದಾಖಲಿಸಿಕೊಂಡಿರುವುದಾಗಿದೆ. ಸದ್ರಿಯವರ ವಿರುದ್ಧ ದಾಖಲಾದ ಒಟ್ಟು 26 ಪ್ರಕರಣಗಳಲ್ಲಿ ಅವರ ವರ್ತನೆಯನ್ನು ಈ ಕೆಳಗಿನಂತೆ ಗಮನಿಸಲಾಗಿರುತ್ತದೆ ಎಂದು ಪೊಲೀಸ್ ಉಪಾಧೀಕ್ಷಕರು, ಬಂಟ್ವಾಳ ಉಪವಿಭಾಗ, ಬಂಟ್ವಾಳ ಇವರು ವರದಿಯನ್ನು ನೀಡಿರುತ್ತಾರೆ. ಸದ್ರಿಯವರು ಜಾತಿ, ಧರ್ಮಗಳ ಮಧ್ಯೆ ವೈಷಮ್ಯವನ್ನು ತಂದೊಡ್ಡಿ ಸಮಾಜದಲ್ಲಿ ಅಶಾಂತಿಯನ್ನುಂಟು ಮಾಡಿರುತ್ತಾರೆ.ಯಾವುದೇ ಮುಂಗಡ ಮಾಹಿತಿಗಳಿಲ್ಲದೆ. ಯಾವುದೇ ಅನುಮತಿ ಪಡೆಯದೇ ಪ್ರತಿಭಟನೆಗಳನ್ನು ಮಾಡಿರುತ್ತಾರೆ. ಸೌಜನ್ಯ ಹತ್ಯೆ ಪ್ರಕರಣದ ಹಿನ್ನೆಲೆಯಲ್ಲಿ ಸಾರ್ವಜನಿಕವಾಗಿ ಪೊಲೀಸ್ ಅಧಿಕಾರಿಗಳಿಗೆ. ಪೊಲೀಸ್ ವ್ಯವಸ್ಥೆಗೆ, ಸಮಾಜದ ಗಣ್ಯರಿಗೆ, ಸರ್ಕಾರಕ್ಕೆ, ಸರ್ಕಾರ ನಡೆಸುತ್ತಿರುವ ಉನ್ನತ ಹುದ್ದೆಯ ರಾಜಕಾರಣಿಗಳಿಗೆ, ಅಸಂವಿಧಾನಿಕ ಪದಗಳಿಂದ ತುಚ್ಚವಾಗಿ ಮಾತನಾಡಿರುತ್ತಾರೆ.ತಾನು ನಡೆಸುವ ಪ್ರತಿಭಟನೆ ಮತ್ತು ಪ್ರತಿಭಟನಾ ಸಭೆಗಳಲ್ಲಿ ಪ್ರಚೋಧನಾಕಾರಿಯಾದ ಮಾತುಗಳನ್ನಾಡಿ ಕಾನೂನು ಸುವ್ಯವಸ್ಥೆಗೆ ಭಂಗವಾಗುವ ರೀತಿಯಲ್ಲಿ ವರ್ತಿಸಿರುತ್ತಾರೆ. ಇವರ ಮೇಲೆ ದಾಖಲಾಗಿರುವ ಒಟ್ಟು 26 ಪ್ರಕರಣಗಳಲ್ಲಿ ಒಟ್ಟು 13 ಪ್ರಕರಣಗಳು ಖುಲಾಸೆಗೊಂಡಿರುತ್ತದೆ. ಇವುಗಳು ಖುಲಾಸೆಯಾಗಲು ಇವರ ರೌಡಿ ಪ್ರವೃತ್ತಿಯೇ ಕಾರಣವಾಗಿರುತ್ತದೆ. ಸದ್ರಿ ಪ್ರಕರಣಗಳ ಪಿರ್ಯಾದಿದಾರರನ್ನು. ಸಾಕ್ಷಿದಾರರನ್ನು ತನ್ನ ದರ್ಪ ಮತ್ತು ರೌಡಿ ಪ್ರವೃತ್ತಿಯಿಂದ ನ್ಯಾಯಾಲಯದಲ್ಲಿ ಸರಿಯಾದ ರೀತಿಯಲ್ಲಿ ಸಾಕ್ಷಿಯನ್ನು ಹೇಳದೇ ಇರುವಂತೆ ಮಾಡಿ ಪ್ರಕರಣಗಳು ಖುಲಾಸೆಯಾಗುವಂತೆ ಮಾಡಿರುತ್ತಾರೆ ಎಂದು ಉಲ್ಲೇಖ(5) ರಂತೆ ವರದಿ ಸಲ್ಲಿಸಿರುತ್ತಾರೆ.
ಸದ್ರಿಯವರು ಪದೇ ಪದೇ ಕಾನೂನು ಬಾಹಿರ ಕೃತ್ಯಗಳಲ್ಲಿ ಭಾಗವಹಿಸಿರುವುದರಿಂದ ಸದ್ರಿಯವರನ್ನು ಹದ್ದುಬಸ್ತಿನಲ್ಲಿಡುವ ಸಲುವಾಗಿ ಸದ್ವರ್ತನೆಗಾಗಿ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪಿ.ಎ. ಆರ್. ನಂಬ್ರ: 24/2024 ಕಲಂ 107, 116(3) ಸಿ.ಆರ್.ಪಿ.ಸಿ ಯಡಿಯಲ್ಲಿ ದಿನಾಂಕ: 24-09-2021 ರಂದು ಭದ್ರತಾ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಾಂಡ್ ಮುಚ್ಚಳಿಕೆ ಪಡೆದುಕೊಂಡಿರುವುದಿಲ್ಲ. ನಂತರ ಪಿ.ಎ. ಆರ್ ನಂಬ್ರ: 10/2022 ಕಲಂ. 107, 116(3) ಸಿ. ಆರ್.ಪಿ.ಸಿ ಯಡಿಯಲ್ಲಿ ದಿನಾಂಕ: 25-02-2022 ರಂದು ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ದಿನಾಂಕ: 08-06-2022 ರಂದು ಬಾಂಡ್ ಮುಚ್ಚಳಿಕೆ ಪಡೆದುಕೊಂಡಿರುತ್ತಾರೆ. ನಂತರ ಪಿ.ಎ. ಆರ್ ನಂಬ್ರ: 61/2023 ಕಲಂ 107, 116(3) ಸಿ.ಆರ್.ಪಿ.ಸಿ ಯಡಿಯಲ್ಲಿ ದಿನಾಂಕ: 01-09-2023 ರಂದು ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ದಿನಾಂಕ: 02-09-2023 ರಂದು ಬಾಂಡ್ ಮುಚ್ಚಳಿಕೆ ಪಡೆದುಕೊಂಡಿರುತ್ತಾರೆ. ನಂತರ ಪಿ.ಎ.ಆರ್ ನಂಬ್ರ: 56/2024 ಕಲಂ 126,135(3) ಬಿ. ಎನ್ ಎಸ್ ಎಸ್ ಯಡಿಲ್ಲಿ ದಿನಾಂಕ:26-09-2024 ರಂದು ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಬಾಂಡ್ ಮುಚ್ಚಳಿಕೆ ಪಡೆದುಕೊಂಡಿಲ್ಲ. ನಂತರ ಪಿ.ಎ. ಆರ್ ನಂಬ್ರ: 39/2025 ಕಲಂ 126, 135(3) ಬಿ.ಎನ್.ಎಸ್.ಎಸ್ ಯಡಿಲ್ಲಿ ದಿನಾಂಕ: 22-03-2025 ರಂದು ಭದ್ರತಾ ಕಾಯ್ದೆಯಲ್ಲಿ ಪ್ರಕರಣ ದಾಖಲಾಗಿದ್ದು, ನಂತರ ಇವರು ದಿನಾಂಕ: 18-05-2025 ರಂದು ತಾಲೂಕು ದಂಡಾಧಿಕಾರಿಯವರ ನ್ಯಾಯಾಲಯದಲ್ಲಿ ಸದ್ವರ್ತನೆಗಾಗಿ ಮುಂದಿನ 06 ತಿಂಗಳವರೆಗೆ ಬಾಂಡ್ ಮುಚ್ಚಳಿಕೆಯನ್ನು ಪಡೆದುಕೊಂಡಿರುತ್ತಾರೆ. ತದ ನಂತರ ಸದ್ರಿಯವರು ಬೆಳ್ತಂಗಡಿ ಪೊಲೀಸ್ ಠಾಣಾ ಅ.ಕ್ರ: 75/2025 ಮತ್ತು ಅ.ಕ್ರ: -37/2025 ಅ.ಕ್ರ 79/2025 ಮುಚ್ಚಳಿಕೆ ಷರತ್ತನ್ನು ಉಲ್ಲಂಘಿಸಿರುವುದರಿಂದ ಇವರು ಬಾಂಡ್‌ನಲ್ಲಿ ನಮೂದಿಸಿದ ಭದ್ರತಾ ಮೊತ್ತವನ್ನು ಮುಟ್ಟುಗೋಲು ಹಾಕಲು ದಿನಾಂಕ: 20-08-2025 ರಂದು ತಾಲೂಕು ದಂಡಾಧಿಕಾರಿಯವರಿಗೆ ವರದಿಯನ್ನು ಸಲ್ಲಿಸಿದ್ದು, ವಿಚಾರಣೆಯಲ್ಲಿದೆ. ತದ ನಂತರವೂ ಸದ್ರಿಯವರು ಪದೇ ಪದೇ ಗಂಭೀರ ಸ್ವರೂಪದ ಅವರಾಡ ಕೃತ್ಯಗಳಲ್ಲಿ ಭಾಗಿಯಾಗಿರುತ್ತಾರೆ.


ಸದ್ರಿಯವರು ತನ್ನ ಮೇಲೆ ನಿರಂತರವಾಗಿ ಗುರುತರವಾದ ಪ್ರಕರಣಗಳಿದ್ದರೂ, ನ್ಯಾಯಾಲಯದಿಂದ ಜಾಮೀನುಗಳನ್ನು ಪಡೆದುಕೊಂಡಿದ್ದರೂ ಈ ನೆಲದ ಕಾನೂನಿನ ಮೇಲೆ ಕಿಂಚಿತ್ತೂ ಭಯ ಹಾಗೂ ಗೌರವವಿಲ್ಲದೇ ಕ್ರಿಮಿನಲ್ ಚಟುವಟಿಕೆಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಜನರ ಮನಸ್ಸಿನಲ್ಲಿ ಭಯ ಉಂಟಾಗುವ ಭಾವನೆಯನ್ನು ಮೂಡಿಸಿರುತ್ತಾರೆ ಮತ್ತು ಜನರಲ್ಲಿ ತನ್ನ ಬಗ್ಗೆ “ಅಸುರಕ್ಷತೆಯ ಭಾವನೆ ಯನ್ನು ಮೂಡಿಸಿರುತ್ತಾರೆ. ಸದ್ರಿಯವರು ಸಮಾಜದ ಶಾಂತಿಗೆ ಕಂಟಕನಾಗಿದ್ದು, ಸಾಮಾನ್ಯ ಕಾನೂನುಗಳಿಂದ ಸದ್ರಿಯವರ ಕ್ರಿಮಿನಲ್ ಚಟುವಟಿಕೆಗಳನ್ನು ನಿಯಂತ್ರಿಸುವುದು ಕಷ್ಟ ಸಾಧ್ಯವಾಗಿದ್ದು, ಈ ಹಿನ್ನಲೆ ಮಹೇಶ್ ಶೆಟ್ಟಿ ತಿಮರೋಡಿಯನ್ನು ಗಡಿಪಾರು ಮಾಡಲಾಗಿದೆ ಎಂದು ತಿಳಿಸಲಾಗಿದೆ.

Share Information