Connect with us

LATEST NEWS

ಆಕ್ಟಿವ್ ಟೆಂಪೋಟ್ರಾವೆಲರ್ ನಡುವೆ ಅಪಘಾತ – ಹಲವರಿಗೆ ಗಾಯ

ಉಡುಪಿ ಮಾರ್ಚ್ 9: ಆಕ್ಟಿವಾ ಹಾಗೂ ಟೆಂಪೋಟ್ರಾವೆಲರ್ ನಡುವೆ ಅಪಘಾತ ಸಂಭವಿಸಿ ಹಲವರಿಗೆ ಸಣ್ಣಪುಟ್ಟ ಗಾಯಗಳಾದ ಘಟನೆ ಉಡುಪಿ ಸಮೀಪದ ಕಟಪಾಡಿ ರಾಷ್ಟ್ರೀಯ ಹೆದ್ದಾರಿ66 ರಲ್ಲಿ ತಡರಾತ್ರಿ ನಡೆದಿದೆ.

ಮಂಗಳೂರಿನಿಂದ ಸವದತ್ತಿಗೆ ಹೊರಟಿದ್ದ ಪ್ರವಾಸಿಗರು ಇದ್ದ ಟೆಂಪೋಟ್ರಾವೆಲರ್ ಆಕ್ಟಿವಾ ಸ್ಕೂಟರ್ ನಲ್ಲಿದ್ದ ಸವಾರನನ್ನು ರಕ್ಷಿಸಲು ಹೋದಿ ರಸ್ತೆಯ ಡಿವೈಡರ್ ದಾಟಿ ಲೈಟ್ ಕಂಬವೊಂದಕ್ಕೆ ಡಿಕ್ಕಿ ಹೊಡೆದಿದೆ.

ಈ ಘಟನೆಯಲ್ಲಿ ಟಿಟಿಯಲ್ಲಿದ್ದ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕಾಗಮಿಸಿದ ಪೊಲೀಸರು ವಾಹನ ತೆರವುಗೊಳಿಸಿದ್ದು, ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.