ಆಟೋ ಗೆ ಡಿಕ್ಕಿ ಹೊಡೆದ ಲಾರಿ ಶಾಲಾ ಶಿಕ್ಷಕಿ ಸಾವು, ಆಟೋ ಚಾಲಕ ಗಂಭೀರ

ಮಂಗಳೂರು ಡಿಸೆಂಬರ್ 1: ಮಂಗಳೂರಿನ ಕದ್ರಿ ಕಂಬಳದ ಬಳಿ ಮಿನಿ ಲಾರಿ ಹಾಗೂ ಆಟೋ ರಿಕ್ಷಾ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಶಾಲಾ ಶಿಕ್ಷಕಿ ಮೃತಪಟ್ಟಿರುವ ಘಟನೆ ನಡೆದಿದೆ.

ಮೃತ ಶಿಕ್ಷಕಿಯನ್ನು ಶೈಲಜಾ ಎಂದು ಗುರುತಿಸಲಾಗಿದ್ದು, ಇವರು ಪಣಂಬೂರಿನ ಕೇಂದ್ರಿಯ ವಿದ್ಯಾಲಯ ಶಾಲೆಯ ಶಿಕ್ಷಕಿಯಾಗಿದ್ದರು. ಶೈಲಜಾ ನಗರದ ಬಿಜೈ ನಿವಾಸಿ ಎಂದು ತಿಳಿದು ಬಂದಿದೆ. ಮಿನಿ ಲಾರಿಯೊಂದು ಆಟೋ ರಿಕ್ಷಾವನ್ನು ತಪ್ಪಿಸಲು ಹೋಗಿ ವಿರುದ್ದ ದಿಕ್ಕಿನಲ್ಲಿ ಬರುತ್ತಿದ್ದ ಇನ್ನೊಂದು ರಿಕ್ಷಾಗೆ ಡಿಕ್ಕಿ ಹೊಡೆದಿದೆ. ಆಟೋ ರಿಕ್ಷಾವನ್ನು ಕೆಲವು ಮೀಟರಗಳಷ್ಟು ದೂರ ಎಳೆದುಕೊಂಡು ಹೋಗಿದೆ. ಆಟೋದಲ್ಲಿ ಪ್ರಯಾಣ ನಡೆಸುತ್ತಿದ್ದ ಶಿಕ್ಷಕಿಯು ಮೃತ ಪಟ್ಟಿದ್ದು ಆಟೋ ಚಾಲಕನಿಗೆ ಗಂಭೀರ ಗಾಯಗಳಾಗಿವೆ ಎಂದು ತಿಳಿದು ಬಂದಿದೆ. ಅಪಘಾತ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಅಪಘಾತದ ತೀವ್ರತೆ ತಿಳಿಸುತ್ತದೆ.