Connect with us

LATEST NEWS

ಕದ್ರಿ ಕಂಬ್ಳ ಜಂಕ್ಷನ್‌ ನಲ್ಲಿ ಯುವತಿಯ ಮೈಮೇಲೆ ಹರಿದ ಕಾರು..! 

ಮಂಗಳೂರು ಅಗಸ್ಟ್ 7: ಮಂಗಳೂರು ನಗರದ ಕದ್ರಿ ಕಂಬ್ಳ ರಸ್ತೆಯಲ್ಲಿ ಕಾರೊಂದು ಯುವತಿಯೊಬ್ಬಳ ಮೇಲೆ ಹರಿದ ಕಾರಣ ಯುವತಿ ಗಂಭೀರ ಗಾಯಗೊಂಡ ಘಟನೆ ನಡೆದಿದೆ.


ನಗರದ ಕದ್ರಿ ಕಂಬಳ ಜಂಕ್ಷನ್‌ನಲ್ಲಿ ಇಂದು ಬೆಳಿಗ್ಗೆ ದ್ವಿಚಕ್ರ ವಾಹನ ಸವಾರೆಗೆ ವಿರುದ್ದ ಧಿಕ್ಕಿನಿಂದ  ಕಾರೊಂದು ಡಿಕ್ಕಿ ಹೊಡೆದಿದ್ದು, ಹೊಡೆದ ರಭಸಕ್ಕೆ ಯುವತಿ ರಸ್ತೆಗೆ ಬಿದ್ದಿದ್ದು, ಬಳಿಕ ಯುವತಿ ಮೇಲೆಯೇ ಹರಿದ ಕಾರು ಯುವತಿಯನ್ನು ಮಾರುದ್ದ ಎಳೆದೊಯ್ದಿದೆ.


ಗಾಯಗೊಂಡ ಯುವತಿಯನ್ನು ಪುತ್ತೂರಿನ ಕೆದಿಲ ನಿವಾಸಿ ವಾಣಿಶ್ರೀ ಭಟ್ (22) ಎಂದು ಗುರುತಿಸಲಾಗಿದ್ದು, ಸ್ಥಳೀಯರು ಮತ್ತು ಆ ಮಾರ್ಗವಾಗಿ ಬರುತ್ತಿದ್ದ ಪೊಲೀಸ್‌ ಸಿಬಂದಿಗಳು ಕಾರನ್ನು ಮೇಲಕ್ಕೆತ್ತಿ ಅಡಿಗೆ ಬಿದ್ದಿದ್ದ ಯುವತಿಯನ್ನು ಹೊರಗಡೆ ತೆಗೆದಿದ್ದಾರೆ.
ಯುವತಿಯ  ತಲೆಗೆ ಮತ್ತು ಪಕ್ಕೆಲುಬುಗಳಿಗೇ ತೀವ್ರ ಗಾಯಗಳಾಗಿದ್ದು, ಇದೇ ಮಾರ್ಗವಾಗಿ ಬರುತ್ತಿದ್ದ ಶಾಸಕ ಯು ಟಿ ಖಾದರ್ ಕೂಡಲೇ‌ ಗಂಭೀರ ಗಾಯಗೊಂಡ ಯುವತಿ ವಾಣಿಶ್ರೀಯನ್ನು ತಮ್ಮ ಕಾರಿನಲ್ಲಿ ಹಾಕಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆಯನ್ನು ತೋರಿಸಿದ್ದಾರೆ.