Connect with us

    DAKSHINA KANNADA

    ಚಲಿಸುತ್ತಿದ್ದ ಲಾರಿಯಡಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದ ಯುವಕ ಸಾವು

    ಸುಳ್ಯ ಎಪ್ರಿಲ್ 21: ಚಲಿಸುತ್ತಿದ್ದ ಲಾರಿ ಅಡಿಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾನೆ.


    ಮೃತನನ್ನು ಉತ್ತರ ಕರ್ನಾಟಕ ಮೂಲದ ಮಂಜುನಾಥ ಎಂದು ಗುರುತಿಸಲಾಗಿದೆ. ಇವನು ನಿನ್ನೆ ಸುಳ್ಯದ ಗಾಂಧಿನಗರದಲ್ಲಿ ಚಲಿಸುತ್ತಿದ್ದ ಲಾರಿಯೊಂದರ ಅಡಿಗೆ ಹಾರಿ ಆತ್ಮಹತ್ಯೆ ಯತ್ನಿಸಿದ್ದಾನೆ. ಗಂಭೀರ ಗಾಯಗೊಂಡು ಮಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನಪ್ಪಿದ್ದಾನೆ.

    ಕೂಲಿಕಾರ್ಮಿಕರಾಗಿದ್ದ ಮಂಜುನಾಥ ಗಾಂಧಿನಗರದಲ್ಲಿ ಬಾಡಿಗೆ ರೂಂ ನಲಿದ್ದು, ತೆಂಗಿನ ಕಾಯಿ ಹೇರಿಕೊಂಡು ಬರುತ್ತಿದ್ದ ಲಾರಿಯ ಅಡಿಗೆ ಯುವಕ ಜಿಗಿದಿರುವುದು ಸಿ.ಸಿ. ಕ್ಯಾಮರಾ ದೃಶ್ಯದಲ್ಲಿ ಕಂಡು ಬಂದಿದ್ದು, ಆತ ಆತ್ಮಹತ್ಯೆಗೆ ಯತ್ನಿಸಿದ್ದಾನೆ ಎಂದು ಶಂಕಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply