LATEST NEWS
ಮಂಗಳೂರು ಭ್ರಷ್ಟ ಅಧಿಕಾರಿಯ ಮನೆ ಮೆಲೆ ಎಸಿಬಿ ದಾಳಿ
ಮಂಗಳೂರು ಭ್ರಷ್ಟ ಅಧಿಕಾರಿಯ ಮನೆ ಮೆಲೆ ಎಸಿಬಿ ದಾಳಿ
ಮಂಗಳೂರು ಜೂನ್ 12: ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಮಂಗಳೂರಿನಲ್ಲಿ ಬೆಳ್ಳಂ ಬೆಳಗ್ಗೆ ಸರಕಾರಿ ಅಧಿಕಾರಿಯ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದಾರೆ.
ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಎ ಇ ಮಹಾದೇವಪ್ಪರ ಮನೆ, ಕಚೇರಿ ಮೇಲೆ ಎಸಿಬಿ ಎಸ್ಪಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಎ ಇ ಮಹಾದೇವಪ್ಪರ ಭ್ರಷ್ಟಾಚಾರದ ಬಗ್ಗೆ ಖಚಿತ ಮಾಹಿತಿ ಹಿನ್ನಲೆಯಲ್ಲಿ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಸಿದ್ಧೇನಹಳ್ಳಿಯಲ್ಲಿರುವ ಅವರ ಮನೆ, ಚಿತ್ರ ದುರ್ಗದ ಕಣಿವೆಹಳ್ಳಿಯ ಮನೆಗೂ ಎಸಿಬಿ ದಾಳಿ ನಡೆಸಿದ್ದು, ಮಹತ್ವದ ದಾಖಲೆ, ಸೊತ್ತುಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.
VIDEO