ಬೆಂಗಳೂರು ಎಪ್ರಿಲ್ 09: ಪ್ರೀತಿಸಿದ ಯುವತಿ ಮದುವೆಗೆ ಒಪ್ಪದಿದ್ದಕ್ಕೆ ಮನನೊಂದ ಯುವಕನೊಬ್ಬ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಯಲಹಂಕ ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಭಿಷೇಕ್ (23) ಮೃತಪಟ್ಟ ಯುವಕ.

ಇತ್ತೀಚೆಗಷ್ಟೇ ಬಿಕಾಂ ಮುಗಿಸಿದ್ದ ಅಭಿಷೇಕ್, ಕಳೆದ ಆರೇಳು ವರ್ಷಗಳಿಂದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಇಬ್ಬರ ಪ್ರೀತಿಯ ವಿಷಯ ಯುವತಿಯ ಮನೆಯವರಿಗೂ ತಿಳಿದಿತ್ತು. ಆದರೆ, ಯುವತಿಯ ಪೋಷಕರು ಅಭಿಷೇಕ್ ಜೊತೆಗಿನ ಮದುವೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಪೋಷಕರ ಒತ್ತಾಯಕ್ಕೆ ಮಣಿದ ಯುವತಿಯು ಅಭಿಷೇಕ್ನನ್ನು ಮಾತನಾಡಿಸುವುದನ್ನು ನಿಲ್ಲಿಸಿ, ದೂರವಿರಲು ಪ್ರಯತ್ನಿಸಿದ್ದಾಳೆ.
ಇದರಿಂದ ತೀವ್ರವಾಗಿ ನೊಂದ ಅಭಿಷೇಕ್, ಡೆತ್ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾನೆ. ಸ್ಥಳಕ್ಕೆ ಯಲಹಂಕ ನ್ಯೂಟೌನ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.