LATEST NEWS
ಶಾಲಾ ವಾಹನದ ಮೇಲೆ ಬಿದ್ದ ಮರ ವಿಧ್ಯಾರ್ಥಿಗಳು ಪಾರು
ಶಾಲಾ ವಾಹನದ ಮೇಲೆ ಬಿದ್ದ ಮರ ವಿಧ್ಯಾರ್ಥಿಗಳು ಪಾರು
ಮಂಗಳೂರು ಅಗಸ್ಟ್ 14: ಶಾಲಾ ವಾಹನದ ಮೇಲೆ ಮರವೊಂದು ಉರುಳಿ ಬಿದ್ದ ಘಟನೆ ಮಂಗಳೂರಿನ ನಂತೂರ್ ಸರ್ಕಲ್ ಬಳಿ ನಡೆದಿದೆ.
ಖಾಸಗಿ ಶಾಲೆಗೆ ಸೇರಿದ ಬಸ್ ಇದಾಗಿದ್ದು, ಶಾಲಾ ಬಸ್ ನಲ್ಲಿ 17 ವಿಧ್ಯಾರ್ಥಿಗಳು ಪ್ರಯಾಣಿಸುತ್ತಿದ್ದರು. ನಂತೂರ್ ಸರ್ಕಲ್ ಬಳಿ ಮರ ಬಸ್ ಮೇಲೆ ಬಿದ್ದಿದ್ದು ವಿಧ್ಯಾರ್ಥಿಗಳಿಗೆ ಸಣ್ಣಪುಟ್ಟಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.ಸ್ಥಳಕ್ಕೆ ಡಿಸಿಪಿ ಹಾಗೂ ಪೊಲೀಸ್ ತಂಡ ಆಗಮಿಸಿದ್ದು, ಪರಿಹಾರ ಕಾರ್ಯಾಚರಣೆ ನಡೆಸಿದ್ದಾರೆ.