ಬೆಂಗಳೂರು, ಫೆಬ್ರವರಿ 12: ತನ್ನ ಹೆತ್ತ ತಂದೆ ಹಾಗೂ ತಾಯಿಯನ್ನು ಪುತ್ರನೇ ಚಾಕುವಿನಿಂದ ಇರಿದು ಬರ್ಬರವಾಗಿ ಪ್ರಾಣ ತೆಗೆದಿರುವ ಘಟನೆ ಬೆಂಗಳೂರಿನ ವಿಜ್ಞಾನ ನಗರದ ಅಪಾರ್ಟ್ಮೆಂಟ್ನಲ್ಲಿ ನಡೆದಿದೆ.
60 ವರ್ಷದ ನಿವೃತ್ತ ನೇವಿ ಕ್ಯಾಪ್ಟ ನವೀನ್ ಚಂದ್ರ ಭಟ್, 55 ವರ್ಷದ ಪತ್ನಿ ಡಾ.ಶ್ಯಾಮಲಾ ಭಟ್ ಮೃತ ದುರ್ದೈವಿಗಳು. ಸ್ವಂತ ಸಾಫ್ಟ್ವೇರ್ ಕಂಪನಿ ಹೊಂದಿದ್ದ ಮಗ ರೋಹನ್ ಚಾಕುವಿನಿಂದ ಮನಸೋ ಇಚ್ಚೆ ಹಲ್ಲೆ ಮಾಡಿದ್ದ. ಬಳಿಕ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆ ಸೇರಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೇ ಗಂಡ ಹೆಂಡತಿ ಇಬ್ಬರೂ ಪ್ರಾಣ ಬಿಟ್ಟಿದ್ದಾರೆ. ಮೃತದೇಹಗಳನ್ನ ಬೌರಿಂಗ್ ಆಸ್ಪತ್ರೆ ರವಾನಿಸಿದ್ದಾರೆ. ಸದ್ಯ ಹಂತಕ ರೋಹನ್ ಭಟ್ ನನ್ನು ಹೆಚ್ಎಎಲ್ ಪೊಲೀಸರು ಬಂಧಿಸಿದ್ದು, ವಿಚಾರಣೆಗೊಳಪಡಿಸಿದ್ದಾರೆ.