DAKSHINA KANNADA
ವಿವಾಹಿತ ಯುವತಿಯನ್ನು ಅತ್ಯಾಚಾರಗೈದು 1.70 ಲಕ್ಷ ರೂ ಪಡೆದು ವಂಚನೆ
ಕಡಬ, ಆಗಸ್ಟ್ 03: ವಿವಾಹಿತ ಯುವತಿಯೋರ್ವಳನ್ನು ಅತ್ಯಾಚಾರಗೈದು ಮದುವೆಯಾಗುತ್ತೇನೆಂದು ನಂಬಿಸಿ 1.70 ಲಕ್ಷ ರೂಪಾಯಿ ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ತಾಲೂಕಿನ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂತ್ರಸ್ತ ಯುವತಿಯು ತನ್ನ ಮಕ್ಕಳೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮೇ.20 ರಂದು ರಾತ್ರಿ 10 ಗಂಟೆಗೆ ಪವನ್ ಎಂಬಾತ ಮದ್ಯಪಾನ ಮಾಡಿಕೊಂಡು ಯುವತಿಯನ್ನು ಅತ್ಯಾಚಾರಗೈದಿದ್ದಾನೆ. ಈ ಬಗ್ಗೆ ಯುವತಿ ಪೊಲೀಸ್ ಠಾಣೆಗೆ ದೂರು ನೀಡುತ್ತೇನೆ ಎಂದು ತಿಳಿಸಿದಾಗ ನಾನು ನಿನ್ನನ್ನು ಮದುವೆಯಾಗುತ್ತೇನೆ. ಪೊಲೀಸ್ ಕಂಪ್ಲೇಟ್ ಮಾಡಬೇಡ ಎಂದು ಹೇಳಿ ವಕೀಲರ ಮುಖಾಂತರ ಲಿಖಿತ ಒಪ್ಪಿಗೆ ನೀಡಿದ್ದನು.
ಜೊತೆಗೆ ಇದಕ್ಕಾಗಿ ಯುವತಿಯ ಕೈಯಿಂದ 1,70,000 ರೂಪಾಯಿ ಹಣವನ್ನು ಪಡೆದುಕೊಂಡು ಈಗ ಮದುವೆಯಾಗುವುದಿಲ್ಲ ಎಂದು ವಂಚನೆ ಮಾಡಿದ್ದಾಗಿ ಯುವತಿ ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಅದರನ್ವಯ ಯುವಕನ ಮೇಲೆ ಪ್ರಕರಣ ದಾಖಲಾಗಿದೆ.
You must be logged in to post a comment Login