Connect with us

    LATEST NEWS

    ಕ್ರಿಶ್ಚಿಯನ್ ಮತದ ಒಂದು ಗುಂಪು ಕೊರೊನಾ ಲಸಿಕೆ ವಿರೋಧಿಸುತ್ತಿದೆ: ಸಂಸದೆ ಶೋಭಾ ಕರಂದ್ಲಾಜೆ

    ಉಡುಪಿ, ಮೇ 27: ಕ್ರಿಶ್ಚಿಯನ್ ಮತದ ಒಂದು ಗುಂಪು ಕೊರೊನಾ ಲಸಿಕೆ ವಿರೋಧಿಸುತ್ತಿದೆ, ಈ ಕುರಿತಾದ ನನ್ನ ನಿಲುವಿನಲ್ಲಿ ಸ್ಪಷ್ಟವಾಗಿದ್ದೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.ಉಡುಪಿಯಲ್ಲಿ ಮಾತನಾಡಿದ ಅವರು, ಚಿಕ್ಕಮಗಳೂರಿನ ಆಲ್ದೂರು, ಮೂಡಿಗೆರೆಯ ಕೆಲಭಾಗದಲ್ಲಿ ಲಸಿಕೆ ವಿರೋಧಿಸಲಾಗುತ್ತಿದೆ. ಈ ಕ್ರಿಶ್ಚಿಯನ್ ಗುಂಪಿನವರು ಸೌತ್ ಇಂಡಿಯನ್ ಚರ್ಚ್​​ಗೆ ಸೇರಿದವರಲ್ಲ. ಕ್ಯಾಥೋಲಿಕ್ ಮತ್ತು ಪ್ರೊಟೆಸ್ಟೆಂಟ್ ಗಳ ಬಗ್ಗೆ ನಾನು ಹೇಳುತ್ತಿಲ್ಲ, ಹೊಸದಾಗಿ ಮತಾಂತರ ಆರಂಭಿಸಿರುವ ಕೆಲ ಗುಂಪಿನಿಂದ ಅಪಪ್ರಚಾರ ಆಗುತ್ತಿರೋದು ನಿಜ, ಪರಿಶಿಷ್ಟ ಜಾತಿ ಪಂಗಡವನ್ನು ಆಮಿಷ ಒಡ್ಡಿ ಮತಾಂತರ ಮಾಡುತ್ತಿದ್ದಾರೆ.

    ಹೊಸ ಈ ಗುಂಪಿನ ಧರ್ಮಗುರುಗಳೇ ಲಸಿಕೆ ಪಡೆಯಬೇಡಿ, ಏಸು ನಿಮ್ಮನ್ನು ಗುಣಪಡಿಸುತ್ತಾನೆ ಎನ್ನುತ್ತಾರೆ. ನನ್ನ ಹೇಳಿಕೆಯನ್ನು ಯಾರು ತಪ್ಪು ಗ್ರಹಿಕೆ ಮಾಡಬೇಡಿ ಎಂದ್ರು.

    ಮುಖ್ಯವಾಹಿನಿಯಲ್ಲಿರುವ ಚರ್ಚ್ಗಳು ದಾರಿ ತಪ್ಪಿಸುತ್ತಿಲ್ಲ. ಪೆಂಟಕೋಸ್ತ್, ಸೆವೆನ್ತ್ ಡೇ ಎಡ್ವೆಂಟಿಸ್ಟ್ ಈ ಗುಂಪುಗಳು ದಾರಿ ತಪ್ಪಿಸುತ್ತಿದ್ದಾರೆ. ನಾನೇನು ವಿವಾದಕ್ಕಾಗಿ ಮಾತನಾಡುತ್ತಿಲ್ಲ. ಜನರು ಜಾಗೃತಿಯಾಗಬೇಕು ಎಂದು ಮಾತನಾಡುತ್ತಿದ್ದೇನೆ, ಅನುಮಾನ ಇದ್ದರೆ ಹೋಗಿ ಅಲ್ಲಿ ಪರಿಶೀಲಿಸಿ ಎಂದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply