ಚಿಕ್ಕಬಳ್ಳಾಪುರ, ನವೆಂಬರ್ 5: 38 ವರ್ಷ ವಯಸ್ಸಿನ ಮಹಿಳೆ ಅಕ್ರಮ ಸಂಬಂಧಕ್ಕಾಗಿ ಪದೇಪದೆ ಕಾಡಿಸುತ್ತಿದ್ದ ಕಾರಣ 19 ವರ್ಷ ವಯಸ್ಸಿನ ಯುವಕನೊಬ್ಬ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರದ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತ ಯುವಕನನ್ನು ನಿಖಿಲ್ ಕುಮಾರ್ (19) ಎಂದು ಗುರುತಿಸಲಾಗಿದೆ. ಮಹಿಳೆಯ ಕಾಟ ತಾಳಲಾರದೆ ಆತ ಸಾವಿಗೆ ಶರಣಾಗಿದ್ದಾನೆ ಎಂದು ಆತನ ಮನೆಯವರು ಆರೋಪಿಸಿದ್ದಾರೆ.

38 ವರ್ಷ ವಯಸ್ಸಿನ ಶಾರದಾ ಎಂಬಾಕೆ ನಿಖಿಲ್ ಜತೆ​ ಅಕ್ರಮ ಸಂಬಂಧ ಹೊಂದಿದ್ದಳು ಎಂಬ ಆರೋಪ ಇದೆ. ಪೋಷಕರ ವಿರೋಧದ ನಡುವೆಯೂ ಶಾರದಾ ಯುವಕನನ್ನು ಬಿಟ್ಟಿರಲಿಲ್ಲ. ಪೋಷಕರ ಕಣ್ತಪ್ಪಿಸಿ ಯುವಕನನ್ನು ಹೊರಗಡೆ ಕರೆದೊಯ್ಯುತಿದ್ದಳು ಎಂಬ ಆರೋಪವಿದೆ.ನವೆಂಬರ್ 05 ದಿನಭವಿಷ್ಯ : ಈ ದಿನದ ಜ್ಯೋತಿಷ್ಯ ಏನು ಹೇಳುತ್ತದೆ?

ಹಲವು ವರ್ಷಗಳ ಹಿಂದೆ ಗಂಡನಿಗೆ ವಿಚ್ಚೇದನ ನೀಡಿದ್ದ ಶಾರದಾ, ಇಬ್ಬರು ಮಕ್ಕಳೊಂದಿಗೆ ಮೂಡಚಿಂತಹಳ್ಳಿ ಗ್ರಾಮದಲ್ಲಿ ವಾಸವಿದ್ದಳು. ಯುವಕ ನಿಖಿಲ್​​ಗೆ ಅಕ್ರಮ ಸಂಬಂಧಕ್ಕಾಗಿ ಕಾಟ ಕೊಡುತ್ತಿದ್ದಳು ಎಂಬ ಆರೋಪವಿದೆ.

ಸದ್ಯ, ಚಿಂತಾಮಣಿಯ ಕಾಚಹಳ್ಳಿ ಕೆರೆ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದೆ. ಮೃತ ಯುವಕ ನಿಖಿಲ್ ಪೋಷಕರು ಈಗ ಶಾರದಾ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಚಿಂತಾಮಣಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share Information