Connect with us

    LATEST NEWS

    ಉಡುಪಿಯಲ್ಲಿ 92 ಮಂದಿಗೆ ಕೊರೊನಾ ಸೊಂಕು

    ಉಡುಪಿಯಲ್ಲಿ 92 ಮಂದಿಗೆ ಕೊರೊನಾ ಸೊಂಕು

    ಉಡುಪಿ ಜೂನ್ 4: ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೆ ಇದ್ದು ಇಂದು ಮತ್ತೆ 92 ಮಂದಿಯಲ್ಲಿ ಕೊರೊನಾ ಸೊಂಕು ಕಾಣಿಸಿಕೊಂಡಿದೆ.
    ಇಂದಿನ 92 ಪ್ರಕರಣಗಳೊಂದಿಗೆ ಉಡುಪಿಯಲ್ಲಿ ಕೊರೊನಾ ಸೊಂಕಿತರ ಸಂಖ್ಯೆ 564ಕ್ಕೆ ಏರಿಕೆಯಾಗಿದ್ದು, ಇದರೊಂದಿಗೆ ಮತ್ತೆ ರಾಜ್ಯದಲ್ಲಿ ಕೊರೊನಾ ಸೊಂಕಿತರ ಸಂಖ್ಯೆಯಲ್ಲಿ ಮೊದಲ ಸ್ಥಾನಕ್ಕೆ ಏರಿಕೆಯಾಗಿದೆ.

    ಇಂದಿನ ಎಲ್ಲಾ ಪ್ರಕರಣಗಳು ಮಹಾರಾಷ್ಟ್ರ ಬಂದು ಉಡುಪಿ ಜಿಲ್ಲೆಯಲ್ಲಿ ಕ್ವಾರಂಟೈನ್ ನಲ್ಲಿರುವವರು , ವೈದ್ಯಕೀಯ ವರದಿಗಳು ಬರುತ್ತಿದ್ದಂತೆ ಸೋಂಕಿತರನ್ನ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ. 564 ಸಂಖ್ಯೆಯ ಮೂಲಕ ಉಡುಪಿ ಅತೀ ಹೆಚ್ಚು ಕೊರೊನಾ ಪೀಡಿತರು ಇರುವ ಜಿಲ್ಲೆಯಾಗಿದೆ.

    ಸೋಂಕಿತ 564 ಜನರಲ್ಲಿ 528 ಜನ ಮಹಾರಾಷ್ಟ್ರದಿಂದ ಬಂದವರೇ ಆಗಿದ್ದಾರೆ. ರೋಗ ಲಕ್ಷಣಗಳು ಹೆಚ್ಚಿರುವವರು ಟಿಎಂಎಪೈ ಕೋವಿಡ್ ಆಸ್ಪತ್ರೆಗೆ, ಉಳಿದವರನ್ನು ತಾಲೂಕು ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗುತ್ತಿದೆ.
    ಓರ್ವ ಸೋಂಕಿತ ಕ್ವಾರಂಟೈನ್ ಮುಗಿಸಿ ಮಂಗಳೂರಿನಲ್ಲಿದ್ದು, ಆತನ ಮಾಹಿತಿಯನ್ನು ದಕ್ಷಿಣಕನ್ನಡ ಜಿಲ್ಲೆಗೆ ರವಾನಿಸಲಾಗಿದೆ. ಆಶ್ಚರ್ಯ ಅಂದ್ರೆ 92 ಜನರಲ್ಲಿ 87 ಜನಕ್ಕೆ ಶೀತ, ಜ್ವರದಂತಹ ಲಕ್ಷಣಗಳೂ ಇಲ್ಲ ಅಂತ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply