ಬೆಂಗಳೂರು, ಫೆಬ್ರವರಿ 23: ಅನೈತಿಕ ಸಂಬಂಧ ಶಂಕೆ ಮೇರೇಗೆ ಪತಿಮಹಾಶಯ ತನ್ನ ಪತ್ನಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅನೈತಿಕ ಸಂಬಂಧ ಆರೋಪ ಮಾಡಿ ಗರ್ಭಿಣಿ ಪತ್ನಿಯ ಮೇಲೆ‌ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ​ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುಮಾರು 8 ವರ್ಷಗಳ ಹಿಂದೆ ಜ್ಯೋತಿ ಹಾಗೂ ಅನುರಾಗ ಪಾಂಡೆ ಅನ್ನೋರು ಉತ್ತರ ಪ್ರದೇಶದಲ್ಲಿ ಮದುವೆಯಾಗಿದ್ದರು. ಅನುರಾಗ್ ಬೆಂಗಳೂರಲ್ಲಿ ಕೆಲಸ ಮಾಡುತ್ತಿದ್ದರಿಂದ ಜ್ಯೋತಿಯನ್ನುಕೂಡ ಇಲ್ಲಿಗೆ ಕರೆದುಕೊಂಡು ಬಂದಿದ್ದರು. ನಾಲ್ಕು ವರ್ಷಗಳ ಕಾಲ ಪತ್ನಿ ಜೊತೆ ಚೆನ್ನಾಗಿದ್ದ ಪತಿ ನಂತರ ಕಿರುಕುಳ ನೀಡಲು ಶುರಮಾಡಿದ್ದರು ಎಂಬ ಆರೋಪಿಸಲಾಗಿದೆ.

ಪತ್ನಿ ಮೇಲೆ ಅನುಮಾನ

ಪತಿ ಅನುರಾಗ್ ಗೆ ಪತ್ನಿ ಜ್ಯೋತಿ ಮೇಲೆ ಅನುಮಾನ ಇತ್ತ. ಅನೈತಿಕ ಸಂಬಂಧ ಆರೋಪ ಮಾಡಿ ಪತ್ನಿ‌ಯ ಮೇಲೆ ಹಲ್ಲೆ ಮಾಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾರೆ. ಈ ಹಿಂದೆ ಮೊದಲು ಗರ್ಭ ಧರಿಸಿದ್ದಾಗಲೂ ಆಕೆಯನ್ನು ಅನುಮಾನದಿಂದ ಕಂಡು ಹಲ್ಲೆ ಮಾಡಿದ್ದ. ಬಳಿಕ ಗಂಡು ಮಗು ಹುಟ್ಟಿದ ಮೇಲೆ ಕೆಲ ವರ್ಷ ಸುಮ್ಮನಿದ್ದ. ಕೊನೆಗೆ ಮತ್ತೆ ಅನುಮಾನದಿಂದ ಕಿರುಕುಳ ನೀಡಲು ಶುರುಮಾಡಿದ್ದ. ಎರಡನೇ ಬಾರಿ ಗರ್ಭಿಣಿ ಆದ ಮೇಲೆ ಮತ್ತೆ ಅನುಮಾನ ಶುರುವಾಗಿತ್ತಂತೆ.

ಇದೀಗ 9 ತಿಂಗಳ ಗರ್ಭಿಣಿಯಾದ ಮೇಲೆ ಅತ್ತೆ, ಮಾವ, ಪತಿಯಿಂದ ಹಲ್ಲೆ ಮಾಡಿರುವ ಆರೋಪ ಕೇಳಿಬಂದಿದೆ. ಇದರಿಂದ ಗಾಬರಿಯಾದ ಜ್ಯೋತಿ ತವರು ಮನೆಗೆ ಹೋಗಿದ್ದಳು. ಎರಡನೇ ಮಗು ಜನಿಸಿದ ಮೇಲೆ ಮತ್ತೆ ಬೆಂಗಳೂರಿಗೆ ಬಂದಿದ್ದಳು. ಈಗ ಮತ್ತೆ ಹೊಡೆದು ದೈಹಿಕ ಹಿಂಸೆ ನೀಡುತ್ತಿರೋದಾಗಿ ದೂರಿನಲ್ಲಿ ತಿಳಿಸಿದ್ದಾಳೆ.

ಮಾವ ರಾಮಪ್ರಸಾದ್, ಅತ್ತೆ ರಾಣಿ, ಪತಿ ಅನುರಾಗ ಮೇಲೆ ಜ್ಯೋತಿ ದೂರು ನೀಡಿದ್ದಾಳೆ. ನನ್ನ ಮೇಲೆ ಹಲ್ಲೆ ಮಾಡಿ ಮನೆಯಿಂದ ಆಚೆ ಹಾಕಿದ್ದಾರೆ ಎಂದು ಆರೋಪಿಸಿ ಪೊಲೀಸರಿಗೆ ದೂರು ಕೊಟ್ಟಿದ್ದಾಳೆ.

ಜ್ಯೋತಿ ದಕ್ಷಿಣ ವಿಭಾಗದ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

Share Information