Connect with us

LATEST NEWS

ದಕ್ಷಿಣಕನ್ನಡದಲ್ಲಿ ಇಂದು 75 ಮಂದಿಗೆ ಕೊರೊನಾ

ಮಂಗಳೂರು ಜುಲೈ 4: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದೂ ಕೂಡ 75 ಮಂದಿಗೆ ಕೊರೊನಾ ಸೊಂಕು ದೃಢಪಟ್ಟಿದೆ. ಇಂದು ದೃಢಪಟ್ಟ ಸೊಂಕಿತರಲ್ಲಿ 11 ಮಂದಿ ಅಬುಧಾಬಿ, ಮಸ್ಕತ್ ನಿಂದ ಆಗಮಿಸಿದವರಾಗಿದ್ದು, 29 ಮಂದಿಗೆ ILI ಪ್ರಕರಣಗಳಲ್ಲಿ ಸೋಂಕು ಪತ್ತೆಯಾಗಿದೆ.

ಇನ್ನು ರೋಗಿಯ ಪ್ರಾಥಮಿಕ ಸಂಪರ್ಕ ಹೊಂದಿದ್ದ 24 ಮಂದಿಗೆ ಕೊರೊನಾ ಹಬ್ಬಿದ್ದು, ಒಬ್ಬರ ಕೊರೊನಾ ಮೂಲ ಪತ್ತೆ ಹಚ್ಚಲಾಗುತ್ತಿದೆ. ಇದರೊಂದಿಗೆ ದ.ಕ. ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೊಂಕಿತರ ಸಂಖ್ಯೆ 1095 ಏರಿಕೆಯಾಗಿದ್ದು, ಇಂದು 13 ಮಂದಿ ಕೊರೊನಾ ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇಂದು ಮಂಗಳೂರು ತಾಲೂಕು ನಿವಾಸಿಗಳಾದ 65ರ ಹರೆಯದ ಮಹಿಳೆ, 67ರ ಹರೆಯದ ಪುರುಷ, ಸುಳ್ಯ ತಾಲೂಕಿನ 60 ರ ಹರೆಯದ ಮಹಿಳಾ ರೋಗಿ ಸಹಿತ 3 ಸಾವು ಸಂಭವಿಸಿದ್ದು, ಇದರೊಂದಿಗ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 22 ಕ್ಕೆ ಏರಿಕೆಯಾಗಿದೆ.

Facebook Comments

comments