ದ.ಕ ಜಿಲ್ಲೆಯಲ್ಲಿ ನಾಳೆ ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ಅಗತ್ಯವಸ್ತು ಖರೀದಿಗೆ ಅವಕಾಶ

ಮಂಗಳೂರು ಮಾರ್ಚ್ 31: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು ಕೂಡ ಯಾವುದೇ ಕೊರೊನಾ ಪ್ರಕರಣಗಳು ಪತ್ತೆಯಾಗದ ಹಿನ್ನಲೆ ಇಂದಿನಂತೆ ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಾಳೆಯೂ ಲಾಕ್ ಡೌನ್ ಸಡಿಲಿಕೆಯನ್ನು ಘೋಷಿಸಲಾಗಿದೆ. ನಾಳೆ ಬುಧವಾರದಿಂದ ಎಲ್ಲಾ ದಿನಸಿ ಅಂಗಡಿ, ತರಕಾರಿ,‌ಫ್ರೂಟ್ ಅಂಗಡಿಗಳು ಬೆಳಿಗ್ಗೆ 7 ರಿಂದ 12 ಗಂಟೆಯವರೆಗೆ ಓಪನ್ ಇರಲಿದ್ದು, ಹಾಲು, ಮೆಡಿಕಲ್‌, ಗ್ಯಾಸ್ ವಿತರಣೆ, ಪೆಟ್ರೋಲ್ ಪಂಪ್, ಬ್ಯಾಂಕ್ ಗಳು ಎಂದಿನಂತೆ ಕಾರ್ಯನಿರ್ವಹಿಸಲಿದೆ.

ಮಂಗಳೂರಿನ ಸೆಂಟ್ರಲ್ ‌ಮಾರ್ಕೆಟ್ ಹಾಗೂ ಸುರತ್ಕಲ್ ಮಾರ್ಕೆಟ್ ನಲ್ಲಿ ರಿಟೇಲ್ ಅಂಗಡಿಯವರಿಗೆ ಮಾತ್ರ ಖರೀದಿಗೆ ಅವಕಾಶ ನೀಡಲಾಗಿದ್ದು, ಸಾರ್ವಜನಿಕರಿಗೆ ಖರೀದಿಗೆ ಅವಕಾಶವಿಲ್ಲ, ಸಾರ್ವಜನಿಕರು ಮನೆ ಸಮೀಪದ ಅಂಗಡಿಯಲ್ಲೇ ಖರೀದಿಸಬೇಕು ಎಂದು ತಿಳಿಸಲಾಗಿದ್ದು, ಇಂದಿನಂತೆ ಮನೆಯಿಂದ ಒಬ್ಬರೇ ಖರೀದಿಗೆ ತೆರಳಲು ಸೂಚನೆ ನೀಡಲಾಗಿದ್ದು, ಅಗತ್ಯವಾಗಿ ಖರೀದಿ ಸಂದರ್ಭ ಸಾಮಾಜಿಕ‌ ಅಂತರ ಕಾಪಾಡಲು ಜಿಲ್ಲಾಡಳಿತ ಸೂಚನೆ ನೀಡಿದೆ.