DAKSHINA KANNADA
53 ವರ್ಷದ ಮರ ಬೆಳೆದದ್ದು ಕೇವಲ ಒಂದೂವರೆ ಅಡಿ
53 ವರ್ಷದ ಮರ ಬೆಳೆದದ್ದು ಕೇವಲ ಒಂದೂವರೆ ಅಡಿ
ಮೂಡಬಿದಿರೆ ಡಿಸೆಂಬರ್ 02: ಜೈನ್ ಕಾಶಿ ಮೂಡಬಿದ್ರೆಯಲ್ಲಿ 14ನೇ ಆಳ್ವಾಸ್ ನುಡಿಸಿರಿ ರಾಷ್ಟ್ರೀಯ ಸಮ್ಮೇಳನಕ್ಕೆ ಚಾಲನೆ ದೊರೆತಿದೆ. ನುಡಿಸಿರಿಯಲ್ಲಿ ಕನ್ನಡ ನಾಡು ನುಡಿ ಪರಂಪರೆ, ಸಂಸ್ಕೃತಿಯ ಕುರಿತು ಗಂಭೀರಗೋಷ್ಠಿಗಳು ಒಂದೆಡೆಯಾದರೆ ಇನ್ನೊಂದೆಡೆ ಕೃಷಿ ಸಿರಿಯಲ್ಲಿ ಪ್ರಕೃತಿಯ ಅನನ್ಯ ಕೊಡುಗೆಗಳು ಅನಾವರಣಗೊಂಡಿದೆ.
ಆದರೆ ಕೃಷಿ ಸಿರಿಯಲ್ಲಿ ಜನರನ್ನು ಹೆಚ್ಚಾಗಿ ಆಕರ್ಷಿಸುತ್ತಿರುವುದು ಒಂದು ಪುಟ್ಟ ಪ್ರತಿರೂಪ, ಆಕಾರ ಚಿಕ್ಕದಾದರೂ ಆಯಸ್ಸು ಮಾತ್ರ ದೊಡ್ಡದು, ವಿದ್ಯಾಗಿರಿಯ ಕೃಷಿ ಸಿರಿಯಲ್ಲಿ ಆಯೋಜಿಸಿರುವ ಬೋನ್ಸಾಯ್ ಗಿಡಗಳ ಪ್ರದರ್ಶನ ಸಾವಿರಾರು ಜನರನ್ನು ಆಕರ್ಷಿಸುತ್ತಿದೆ.
ಇಲ್ಲಿ ಪ್ರದರ್ಶನಗೊಳ್ಳುತ್ತಿರುವ ಒಂದೊಂದು ಪುಟ್ಟ ಮರ ಸೌಂದರ್ಯದ ಪ್ರತಿರೂಪವಾಗಿ ಕಂಗೊಳಿಸುತ್ತಿದೆ. ಇಲ್ಲಿರುವ ಒಂದೊಂದು ಟ್ರೇಯಲ್ಲಿರುವ ಮರಗಳ ವಯಸ್ಸು ನೋಡಿದರೆ ಹೌಹಾರಬೇಕು, ಇಲ್ಲಿ ಟ್ರೇಗಳ ಮೇಲೆ ಮಿನಿ ಉದ್ಯಾನವನವನ್ನೇ ಬೆಳೆಸಲಾಗಿದೆ.
ನೋಡಲು ಕುರುಚಲು ಗಿಡದಂತೆ ಕಾಣುವ ಬೋನ್ಸಾಯ್ ಸಸ್ಯಗಳು ಅಬ್ಬಬ್ಬಾ ಅಂದರೆ ಒಂದು ಮೀಟರ್ ಗಿಂತ ಜಾಸ್ತಿ ಎತ್ತರಕ್ಕೆ ಬೆಳೆಯಲಾರವು, ಕೃಷಿ ಸಿರಿಯಲ್ಲಿ ಪ್ರದರ್ಶಿಸಲಾಗಿರುವ ಒಂದೊಂದು ಬೊನ್ಸಾಯ್ ಸಸ್ಯಗಳು ಅದ್ಬುತವಾಗಿ ಗೋಚರಿಸುತ್ತಿದೆ. ಆಲದ ಮರ, ಅರಳಿ ಮರ, 53 ವರ್ಷ ಹಿರಿಯ ಪೇಪರ್ ಗಿಡ ಮರವಾಗಿ ಬೆಳೆದಿರುವುದು. ಹುಣಸೇ ಮರ ಸೇರಿದಂತೆ ವಿವಿಧ ಜಾತಿಯ ಬೃಹತ್ ಮರಗಳು ಪುಟ್ಟದಾಗಿ ಬೆಳೆದಿರುವುದನ್ನು ನೋಡುವುದೇ ಕಣ್ಣಿಗೆ ಹಬ್ಬ.
ಈ ಬೋನ್ಸಾಯ್ ಮರಗಳು ಸಾಮಾನ್ಯ ಮರಗಳಂತೆ ನೂರಾರು ವರ್ಷ ಬದುಕಬಲ್ಲವು ಆದರೆ ಮನುಷ್ಯನ ಆರೈಕೆ ಇಲ್ಲದಿದ್ದರೆ ಇವುಗಳ ಆಯಸ್ಸು ಅಂದಿಗೆ ನಿಂತು ಹೋಗುತ್ತದೆ.
You must be logged in to post a comment Login