Connect with us

LATEST NEWS

ಮಂಗಳೂರಿನ 5 ವೈದ್ಯರಿಗೆ ಕೊರೊನಾ ಪಾಸಿಟಿವ್

ಮಂಗಳೂರು ಜೂನ್ 25: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಪೊಲೀಸರ ನಂತರ ಈಗ ವೈದ್ಯರಿಗೂ ಕೊರೊನಾ ಸೋಂಕು ತಗುಲಿದ್ದು, ಮಂಗಳೂರಿನ 5 ವೈದ್ಯರಿಗೆ ಕೊರೊನಾ ಪಾಸಿಟಿವ್ ದಾಖಲಾಗಿದೆ.


ಕೊರೊನಾ ಸೊಂಕು ದೃಢಪಟ್ಟಿರುವ ವೈದ್ಯರು ಕೋವಿಡ್ ಆಸ್ಪತ್ರೆ, ಲೇಡಿಗೋಷನ್ ಆಸ್ಪತ್ರೆ ಮತ್ತು ಕೆಎಂಸಿನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಸೊಂಕು ದೃಢಪಟ್ಟಿರುವ ವೈದ್ಯರಲ್ಲಿ 4 ಮಂದಿ ಮಹಿಳಾ ವೈದ್ಯರು ಇದ್ದಾರೆ. ಒಬ್ಬರು ಕೋವಿಡ್ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಒಬ್ಬರು ಕೆ.ಎಂ.ಸಿ ಯಲ್ಲಿ, ಮೂವರು ಲೇಡಿಗೋಷನ್ ಹೆರಿಗೆ ಆಸ್ಪತ್ರೆಯಲ್ಲಿ ಸೇವೆ ಮಾಡುತ್ತಿದ್ದರು. ಈ ಎಲ್ಲಾ ವೈದ್ಯರ ಅತ್ತಾವರದ ಅಪಾರ್ಟ್ಮೆಂಟ್ ಗಳಲ್ಲಿ ವಾಸವಿದ್ದರು.  ಸದ್ಯ ಜಿಲ್ಲೆಯಲ್ಲಿ 30 ಜನ ವೈದ್ಯರು, ವೈದ್ಯಕೀಯ ಸಿಬ್ಬಂದಿಗಳಿಗೆ ಕ್ವಾರಂಟೈನ್ ಮಾಡಲಾಗಿದೆ.

Facebook Comments

comments