LATEST NEWS
ಮಂಗಳೂರಿನಲ್ಲಿ ಮಹಾಮಾರಿ ಕೊರೊನಾ ಗೆ 4 ನೇಬಲಿ
ಮಂಗಳೂರಿನಲ್ಲಿ ಮಹಾಮಾರಿ ಕೊರೊನಾ ಗೆ 4 ನೇಬಲಿ
ಮಂಗಳೂರು ಮೇ.13: ದಕ್ಷಿಣಕನ್ನಡದಲ್ಲಿ ಕೊರೊನಾ ನಾಲ್ಕನೆ ಬಲಿ ಪಡೆದಿದೆ, ಮಂಗಳೂರಿನ ಬೋಳೂರಿ ನಿವಾಸಿ 58 ವರ್ಷದ ವೃದ್ದೆ ಕೊರೊನಾ ಸೊಂಕಿಗೆ ಬಲಿಯಾಗಿದ್ದಾರೆ. ಮೆದುಳು ಸಂಬಂಧಿತ ಖಾಯಿಲೆಯಿಂದ ಬಳಲುತ್ತಿದ್ದ ವೃದ್ಧೆಗೆ ಎಪ್ರಿಲ್ 30 ರಂದು ಫಸ್ಟ್ ನ್ಯೂರೋ ಸಂಪರ್ಕದಿಂದ ಕೊರೊನಾ ಸೋಂಕು ದೃಢ ಪಟ್ಟಿತ್ತು.
ನಂತರ ಅವರನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಕೊವಿಡ್ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ತೀರಾ ಗಂಭೀರ ಪರಿಸ್ಥಿತಿಯಲ್ಲಿದ್ದ ವೃದ್ದೆಯನ್ನು ವೆನ್ಲಾಕ್ ಐಸಿಯು ನಲ್ಲಿಡಲಾಗಿತ್ತು. ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
ಮೃತ ವೃದ್ದೆಗೆ ಫಸ್ಟ್ ನ್ಯೂರೋ ಆಸ್ಪತ್ರೆ ಯ ಸ್ವೀಪರ್ ನ ಸಂಪರ್ಕದಿಂದ ಸೋಂಕು ಹರಡಿತ್ತು. ಈ ಹಿಂದೆ ಬಂಟ್ವಾಳದ ಇಬ್ಬರು, ಬೋಳೂರಿನ ಒರ್ವ ಸೋಂಕಿತರು ಕೊರೊನಾಗೆ ಬಲಿಯಾಗಿದ್ದರು.