Connect with us

MANGALORE

ಕರಾವಳಿ ಕಾವಲು ಪೊಲೀಸ್ ಪಡೆಯಿಂದ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಿಂದ ನಾಲ್ವರು ಮೀನುಗಾರರ ರಕ್ಷಣೆ

ಕರಾವಳಿ ಕಾವಲು ಪೊಲೀಸ್ ಪಡೆಯಿಂದ ಮುಳುಗುತ್ತಿದ್ದ ಮೀನುಗಾರಿಕಾ ಬೋಟ್ ನಿಂದ ನಾಲ್ವರು ಮೀನುಗಾರರ ರಕ್ಷಣೆ

ಮಂಗಳೂರು ನವೆಂಬರ್ 24: ಬೋಟಿನ ಮೇಲಿದ್ದ ಡಿಸೇಲ್ ಟ್ಯಾಂಕ್ ಬಿದ್ದು ಮುಳುಗುವ ಹಂತದಲ್ಲಿ ಮೀನುಗಾರಿಕಾ ಬೋಟ್ ನಿಂದ ನಾಲ್ವರು ಮೀನುಗಾರರನ್ನು ಕರಾವಳಿ ಕಾವಲು ಪೊಲೀಸ್ ಪಡೆ ರಕ್ಷಿಸಿದೆ.

ಮಲ್ಪೆಯಿಂದ ಮೀನುಗಾರಿಕೆಗೆ ಹೊರಟ್ಟಿದ್ದ ಶ್ರೀಲೀಲಾ ಎಂಬ ಹೆಸರಿನ ಫಿಶಿಂಗ್ ಬೋಟ್ ಬೋಟ್ ಭಟ್ಕಳ ಸಮೀಪ ಮೀನುಗಾರಿಕೆ ಮಾಡುತ್ತಿದ್ದ ಸಂದರ್ಭ ಬೋಟ್ ನಲ್ಲಿದ್ದ ಡಿಸೇಲ್ ಟ್ಯಾಂಕ್ ಬಿದ್ದು, ಬೋಟಿನ ತಳಭಾಗ ಒಡೆದು ಹೋಗಿದೆ. ಈ ಹಿನ್ನಲೆಯಲ್ಲಿ ಸಮುದ್ರದ ನೀರು ಬೋಟಿನ ಒಳಗೆ ನುಗ್ಗಿ ಬೋಟ್ ಮುಳುಗುವ ಹಂತಕ್ಕೆ ತಲುಪಿತ್ತು. ಬೋಟ್ ಮುಳುಗುತ್ತಿರುವ ಬಗ್ಗೆ ಮಾಹಿತಿ ಪಡೆದ ಕರಾವಳಿ ಕಾವಲು ಪೊಲೀಸ್ ಪಡೆ ಕೂಡಲೇ ಕಾರ್ಯಾಚರಣೆ ನಡೆಸಿ 4 ಮೀನುಗಾರರನ್ನು ರಕ್ಷಿಸಿದೆ. ರಕ್ಷಿಸಿದ ಮೀನುಗಾರರನ್ನು ಆನಂದ ಮೊಗೇರ, ಗುರು ಖಾರ್ವಿ, ಮಂಜುನಾಥ, ರಮೇಶ ಛಲವಾದಿ ಎಂದು ಗುರುತಿಸಲಾಗಿದೆ.

ಡಿಸೇಲ್ ಟ್ಯಾಂಕ್ ಬಿದ್ದು ಹಾನಿಯಾಗಿದ್ದ ಶ್ರೀಲೀಲಾ ಬೋಟ್ ಈಗ ಸಂಪೂರ್ಣ ಮುಳುಗಡೆಯಾಗಿದೆ ಎಂದು ತಿಳಿದು ಬಂದಿದೆ.

Facebook Comments

comments