ಜನನುಡಿ – ಪ್ರಕಾಶ್ ರೈ ವಿರುದ್ದ ಪ್ರತಿಭಟನೆಗೆ ಆಗಮಿಸಿದ ಹಿಂದೂ ಜಾಗರಣ ವೇದಿಕೆ ನಾಲ್ವರು ವಶಕ್ಕೆ

ಮಂಗಳೂರು ಡಿಸೆಂಬರ್ 1: ಮಂಗಳೂರಿನಲ್ಲಿ ಸಮಾನ ಮನಸ್ಕರು ಸೇರಿ ನಡೆಸುತ್ತಿರುವ ಜನನುಡಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ ಪ್ರಕಾಶ್ ರೈ ವಿರುದ್ದ ಪ್ರತಿಭಟನೆಗೆ ಆಗಮಿಸಿದ್ದ ನಾಲ್ವರು ಹಿಂದೂ ಜಾಗರಣ ವೇದಿಕೆಯ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಭಿಮತ ಮಂಗಳೂರು ಸಂಘಟನೆ ಆಯೋಜಿಸಿರುವ ಜನನುಡಿ ಸಮ್ಮೇಳನ ಮಂಗಳೂರಿನ ನಂತೂರು ವೃತ್ತದ ಸಮೀಪದಲ್ಲಿರುವ ಶಾಂತಿಕಿರಣದಲ್ಲಿ ನಡೆಯಿತ್ತಿದೆ. ಈ ಕಾರ್ಯಕ್ರಮಕ್ಕೆ ಹಿರಿಯ ನಟ ಪ್ರಕಾಶ್ ರೈ ಅತಿಥಿಯಾಗಿ ಆಗಮಿಸಿದ್ದಾರೆ.

ಎರಡು ದಿನಗಳ ಜನನುಡಿ- 2018 ಆಯೋಜಿಸಲಾಗಿದೆ‌. ಇದೀಗ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದು, ಇದೇ ವೇಳೆ ಶಾಂತಿ ಕಿರಣ ಆವರಣ ಪ್ರವೇಶಿಸಲು ಹಿಂದೂ ಜಾಗರಣ ವೇದಿಕೆಯ ನಾಲ್ವರು ಯತ್ನಿಸಿದರು. ‘ಶರತ್, ಸುಭಾಷ್ ಸೇರಿದಂತೆ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ವಶಕ್ಕೆ ಪಡೆದ ಯುವಕರು ಸಂಶಯಾಸ್ಪದ ರೀತಿಯಲ್ಲಿ ಕಾರ್ಯಕ್ರಮ ಸ್ಥಳಕ್ಕೆ ತೆರಳಲು ಯತ್ನಿಸುತ್ತಿದ್ದರು ಎಂದು ಆರೋಪಿಸಲಾಗಿದ್ದು, ಈ ಹಿನ್ನಲೆಯಲ್ಲಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಆರೋಪಿಗಳು ನಟ ಪ್ರಕಾಶ್ ರೈ ವಿರುದ್ಧ ಪ್ರತಿಭಟಿಸಲು ಸಜ್ಜಾಗಿ ಬಂದಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

ಜನನುಡಿ ಸಮ್ಮೇಳನ ನಡೆಯುತ್ತಿರುವ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತನ್ನು ನಡೆಸಲಾಗುತ್ತಿದ್ದು, ಡಿಸಿಪಿ ಹನುಮಂತರಾಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

VIDEO

3 Shares

Facebook Comments

comments