Connect with us

    LATEST NEWS

    ಕೊಲೆ ದರೋಡೆಗೆ ಸಂಚು ನಾಲ್ವರು ಆರೋಪಿಗಳ ಬಂಧನ

    ಕೊಲೆ ದರೋಡೆಗೆ ಸಂಚು ನಾಲ್ವರು ಆರೋಪಿಗಳ ಬಂಧನ

    ಮಂಗಳೂರು ಫೆಬ್ರವರಿ 3: ದರೋಡೆ ಹಾಗೂ ಕೊಲೆಗೆ ಸಂಚು ರೂಪಿಸುತ್ತಿದ್ದಾರೆ ಎನ್ನಲಾದ ನಾಲ್ವರು ಆರೋಪಿಗಳನ್ನು ಅಪರಾಧ ಪತ್ತೆದಳ ಪೊಲೀಸರು ಬಂಧಿಸಿದ್ದಾರೆ.

    ಬಂಧಿತರನ್ನು ಮನೋಜ್ ಕುಮಾರ್, ಪ್ರಸಾದ್ ಯಾನೆ ಪಚ್ಚು, ಶ್ರವಣ್, ಸುಜಿತ್ ಎಂದು ಗುರುತಿಸಲಾಗಿದೆ. ನಗರದ ಪಳ್ನೀರ್ ಎಂಬಲ್ಲಿ ಸುಮಾರು 9 ರಿಂದ 10 ಮಂದಿ ಟಾಟಾ ಸುಮೋ ಕಾರಿನಲ್ಲಿ ದರೋಡೆಗೆ ಸಂಚು ರೂಪಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಹಿನ್ನಲೆಯಲ್ಲಿ ಮಂಗಳೂರು ಸಿಸಿಬಿ ಪೊಲೀಸರು ದಾಳಿ ನಡೆಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

    ಬಂಧಿತರಿಂದ ತಲವಾರು, ಮಚ್ಚು, ಚೂರಿ , 3 ಮೊಬೈಲ್ ಪೊನ್ ಸೇರಿದಂತೆ 40 ಗ್ರಾಂ ಗಾಂಜಾ ಹಾಗೂ ಟಾಟಾ ಸುಮೋ ಕಾರನ್ನು ವಶಪಡಸಿಕೊಳ್ಳಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply