Connect with us

    LATEST NEWS

    ಮಣಿಪಾಲದಲ್ಲಿ 4.5ಲಕ್ಷ ರೂ.ಮೌಲ್ಯದ ಮಾದಕ ವಸ್ತು ವಶ: ಓರ್ವನ ಬಂಧನ

    ಉಡುಪಿ, ಅಕ್ಟೋಬರ್ 15: ಉಡುಪಿ ಪೊಲೀಸರು ಕಾರ್ಯಾಚರಣೆ ನಡೆಸಿ ವಿದ್ಯಾರ್ಥಿಗಳಿಗೆ ಮಾರಾಟ ಮಾಡುವ ಉದ್ದೇಶದಿಂದ ತಂದಿರಿಸಿದ್ದ ಎಂ.ಡಿ.ಎಂ.ಎ ನಿಷೇಧಿತ ಮಾತ್ರೆಗಳು ಮತ್ತು ಬ್ರೌನ್ ಶುಗರ್ ನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮಣಿಪಾಲ ಪೊಲೀಸರು ಬ್ರಹ್ಮಾವರ ಮೂಲದ ಆರೋಪಿಯನ್ನು ಬಂಧಿಸಿದ್ದಾರೆ.

    ಆರೋಪಿ ಬ್ರಹ್ಮಾವರದ ಮೊಹಮ್ಮದ್ ಫಜಲ್ ಪೊಲೀಸರು ಬಂಧಿಸಿದ್ದಾರೆ. ವಿದ್ಯಾರ್ಥಿಗಳಿಗೆ ಈ ಮಾದಕ ವಸ್ತುಗಳನ್ನು ಮಾರಾಟ ಮಾಡಲು ಮೊಹಮ್ಮದ್ ಫಜಲ್ ಮಣಿಪಾಲದ ಆರ್ ಟಿಒ ಬಳಿಯ ಎಂಡ್ ಪಾಯಿಂಟ್ ಬಳಿ ಬಂದಿದ್ದ.

    ಈ ಖಚಿತ ಮಾಹಿತಿ ಆಧಾರಿಸಿ ಪೊಲೀಸರು ದಾಳಿ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಈತನಿಂದ 54 ಎಂ.ಡಿ.ಎಂ.ಎ ನಿಷೇಧಿತ ಮಾತ್ರೆಗಳು ಮತ್ತು 30 ಗ್ರಾಂ ಬ್ರೌನ್ ಶುಗರ್ ಮತ್ತು ಎರಡು ಮೊಬೈಲ್ ಫೋನ್ ಗಳು ಸೇರಿ ಸುಮಾರು 4.62 ಲಕ್ಷ ಮೌಲ್ಯದ ಸೊತ್ತುಗಳನ್ನು ಪೋಲಿಸರು ವಶಕ್ಕೆ ಪಡೆದಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply