LATEST NEWS
ಕಾಂಗ್ರೇಸ್ ಮುಖಂಡ ಮಿಥುನ್ ರೈ ಗೆ ಬೆದರಿಕೆ ಪ್ರಕರಣ ಮೂವರ ಬಂಧನ
ಕಾಂಗ್ರೇಸ್ ಮುಖಂಡ ಮಿಥುನ್ ರೈ ಗೆ ಬೆದರಿಕೆ ಪ್ರಕರಣ ಮೂವರ ಬಂಧನ
ಮಂಗಳೂರು ಮೇ 28: ದಕ್ಷಿಣಕನ್ನಡ ಜಿಲ್ಲೆಯ ಪರಾಜತ ಅಭ್ಯರ್ಥಿ ಕಾಂಗ್ರೇಸ್ ಮುಖಂಡ ಮಿಥುನ್ ರೈ ಅವರಿಗೆ ಬೆದರಿಕೆ ಕೈ- ಕಾಲು, ತಲೆ ಕಡಿಯೋದಾಗಿ ಬೆದರಿಕೆ ಒಡ್ಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರನ್ನು ಬಂಟ್ವಾಳದ ನಿವಾಸಿಗಳಾದ ಸಚಿನ್ (25), ನಿಶಾಂತ್ (23), ಕಾಸರಗೋಡು ನಿವಾಸಿ ಕಾರ್ತಿಕ್ (30)ನನ್ನು ಎಂದು ಗುರುತಿಸಲಾಗಿದೆ.
ಮೇ 23ರಂದು ಬಂಟ್ವಾಳ ತಾಲೂಕಿನ ಬಡಕಬೈಲ್‌ನಲ್ಲಿ ನಡೆದ ವಿಜಯೋತ್ಸವದ ವೇಳೆ ಘೋಷಣೆ ಕೂಗಿದ್ದ ಕಾರ್ಯಕರ್ತರು ” ಬೋಳಿಮಗ ಮಿಥುನ್ ರೈ ಬಜರಂಗದಳದ ತಂಟೆಗೆ ಬಂದರೆ ಕೈಕಾಲು ಕಡಿಯೋದು ಮಾತ್ರವಲ್ಲ, ಅಗತ್ಯ ಬಿದ್ದರೆ ತಲೆಯನ್ನೂ ತೆಗೆಯುತ್ತೇವೆ ಎಂದು ತುಳುವಿನಲ್ಲಿ ಹೇಳಿದ್ದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ಗೊಂಡಿತ್ತು.
ಈ ಹಿನ್ನಲೆಯಲ್ಲಿ ಪೊಲೀಸರು ಸಿಆರ್‌ಪಿಸಿ ಸೆಕ್ಷನ್ 108ರಡಿ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದ್ದು, ಇವರ ವಿರುದ್ಧ ಕೊಲೆ ಬೆದರಿಕೆ, ಶಾಂತಿ ಕದಡಲು ಯತ್ನ ಸೇರಿದಂತೆ ವಿವಿಧ ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ.