Connect with us

LATEST NEWS

ದಕ್ಷಿಣಕನ್ನಡ 234; ಉಡುಪಿ 375 ಕೊರೊನಾ ಪ್ರಕರಣ ದಾಖಲು

ಮಂಗಳೂರು ಅಗಸ್ಟ್ 19: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಇಂದು 234 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಇಂದು 4 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇಂದಿನ 234 ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 9535 ಕ್ಕೆ ಏರಿಕೆಯಾಗಿದೆ. ಇಂದು ಜಿಲ್ಲೆಯಲ್ಲಿ 115 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2303 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಕೂಡ ಜಿಲ್ಲೆಯಲ್ಲಿ 4 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 290 ಕ್ಕೆ ಏರಿಕೆಯಾಗಿದೆ. ಇಂದು ದಾಖಲಾದ ಪ್ರಕರಣಗಳಲ್ಲಿ ಮಂಗಳೂರು -148, ಬಂಟ್ವಾಳ – 29, ಸುಳ್ಯ -13, ಪುತ್ತೂರು – 14 ಹೊರ ಜಿಲ್ಲೆಯವರು – 23 ಪ್ರಕರಣಗಳಿವೆ.

ಇನ್ನು ಉಡುಪಿಯಲ್ಲಿ ಇಂದು 375 ಮಂದಿಗೆ ಕೊರೊನಾ ಸೊಂಕು ತಗುಲಿದ್ದು, ಜಿಲ್ಲೆಯಲ್ಲಿ ಒಟ್ಟು ಸಂಕಿತರ ಸಂಖ್ಯೆ 9034ಕ್ಕೆ ಏರಿಕೆಯಾಗಿದೆ. ಉಡುಪಿ ಜಿಲ್ಲೆಯಲ್ಲಿ 6132 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 78 ಮಂದಿ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.

Facebook Comments

comments