Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆಯಲ್ಲಿ 218 ಕೊರೊನಾ ಪ್ರಕರಣ; ಶತಕದ ಗಡಿಯಲ್ಲಿ ಸಾವಿನ ಸಂಖ್ಯೆ

ಮಂಗಳೂರು ಜುಲೈ23: ದಕ್ಷಿಣಕನ್ನಡ ಜಿಲ್ಲೆಯಲ್ಲಿ ಒಂದು ವಾರದ ಲಾಕ್ ಡೌನ್ ಹೇರಿದರೂ ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಇಂದು ಮತ್ತೆ 218 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 7 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇಂದಿನ 218  ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 4214 ಕ್ಕೆ ಏರಿಕೆಯಾಗಿದೆ.

ಇಂದು ಜಿಲ್ಲೆಯಲ್ಲಿ 118 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2253 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು ಕೂಡ ಜಿಲ್ಲೆಯಲ್ಲಿ 7 ಮಂದಿ ಕೊರೊನಾದಿಂದ ಸಾವನಪ್ಪಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 99ಕ್ಕೆ ಏರಿಕೆಯಾಗಿದೆ.

Facebook Comments

comments