Connect with us

    LATEST NEWS

    ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ದ್ವಿತೀಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

    ಬೆಂಗಳೂರು ಅಕ್ಟೋಬರ್ 29: 2018-19 ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು ಪರೀಕ್ಷಾ ಮಂಡಳಿಯು ಪ್ರಕಟ ಮಾಡಿದೆ.

    ತಾತ್ಕಾಲಿಕ ವೇಳಾಪಟ್ಟಿಯಂತೆ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ ಮಾರ್ಚ್ 18ರವರೆಗೆ ನಡೆಯಲಿದೆ. ಎಲ್ಲಾ ವಿಷಯದ ಪರೀಕ್ಷೆಗಳು ಬೆಳಿಗ್ಗೆ 10.15 ರಿಂದ ಮಧ್ಯಾಹ್ನ 1.30ರ ವರೆಗೆ ನಡೆಸಲು ನಿರ್ಧರಿಸಲಾಗಿದೆ.

    ಮಾರ್ಚ್ 1 – ಇತಿಹಾಸ, ಬೇಸಿಕ್ ಮ್ಯಾಥ್ಸ್, ಭೌತಶಾಸ್ತ್ರ
    ಮಾರ್ಚ್ 6 – ಭೂಗರ್ಭಶಾಸ್ತ್ರ, ಹೋಂ ಸೈನ್ಸ್
    ಮಾರ್ಚ್ 7 – ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಗಣಿತ
    ಮಾರ್ಚ್ 8 – ಉರ್ದು, ಸಂಸ್ಕೃತ
    ಮಾರ್ಚ್ 9 – ರಾಜ್ಯಶಾಸ್ತ್ರ, ಸ್ಟ್ಯಾಟಿಸ್ಟಿಕ್ಸ್
    ಮಾರ್ಚ್ 11- ರಸಾಯನ ಶಾಸ್ತ್ರ, ಸಮಾಜಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
    ಮಾರ್ಚ್ 12 – ಭೂಗೋಳಶಾಸ್ತ್ರ,
    ಮಾರ್ಚ್ 13 – ಮನೋಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್
    ಮಾರ್ಚ್ 14 – ಅರ್ಥಶಾಸ್ತ್ರ, ಜೀವಶಾಸ್ತ್ರ
    ಮಾರ್ಚ್ 15 – ಹಿಂದಿ
    ಮಾರ್ಚ್ – 16 – ಕನ್ನಡ
    ಮಾರ್ಚ್ 18 – ಇಂಗ್ಲೀಷ್

    ಎಂದು ಪ್ರಕಟಣೆ ತಿಳಿಸಿದೆ. ಇದು ತಾತ್ಕಾಲಿಕ ವೇಳಾಪಟ್ಟಿಯಾಗಿದ್ದು, ಯಾವುದೇ ಆಕ್ಷೇಪಣೆ ಇದ್ದರೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply