LATEST NEWS
ಕೇರಳ ಭೀಕರ ಅತ್ಯಾಚಾರ ಪ್ರಕರಣ ಬಯಲು 17ರ ಅಪ್ರಾಪ್ತೆ ಮೇಲೆ ಅತ್ಯಾಚಾರ ಎಸಗಿದ 38 ಮಂದಿ
ಕೇರಳ : ಕೇರಳದ ಮಲ್ಲಪ್ಪುರಂನಲ್ಲಿ ಭೀಕರ ಅತ್ಯಾಚಾರ ಪ್ರಕರಣವೊಂದು ಬಯಲಿಗೆ ಬಂದಿದ್ದು, 17ರ ಹರೆಯದ ಅಪ್ರಾಪ್ತ ಯುವತಿಯನ್ನು 38 ಮಂದಿ ಅತ್ಯಾಚಾರ ಮಾಡಿ ಲೈಂಗಿಕ ಶೋಷಣೆ ಮಾಡಿರುವ ಪ್ರಕರಣ ಆಪ್ತ ಸಮಾಲೋಚನೆ ವೇಳೆ ತಡವಾಗಿ ಬೆಳಕಿಗೆ ಬಂದಿದೆ.
ಕೇರಳದ ಮಲಪ್ಪುರಂನ ನಿರ್ಭಯಾ ಕೇಂದ್ರದಲ್ಲಿ ನಡೆದ ಆಪ್ತ ಸಮಾಲೋಚನೆ ವೇಳೆ 17 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯ ತನ್ನ ಮೇಲೆ ಕಳೆದ ಕೆಲ ತಿಂಗಳುಗಳಿಂದ ನಡೆದ ನಿರಂತರವಾಗಿ ಅತ್ಯಾಚಾರ ಬಗ್ಗೆ ಬಾಯಿಬಿಟ್ಟಿದ್ದಾಳೆ. ಅತ್ಯಾಚಾರ ಸಂತ್ರಸ್ತೆ ಬೆಚ್ಚಿಬೀಳಿಸುವ ಸಂಗತಿಗಳನ್ನು ಬಹಿರಂಗಗೊಳಿಸಿದ್ದು. ಕಳೆದ ಕೆಲ ತಿಂಗಳಲ್ಲಿ ತಮ್ಮ ಮೇಲೆ 38 ಮಂದಿ ಪುರಷರು ಅತ್ಯಾಚಾರ ಮತ್ತು ಲೈಂಗಿಕ ಶೋಷಣೆ ನಡೆಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.
ಸಂತ್ರಸ್ಥೆ ಹೇಳಿಕೊಂಡಿರುವಂತೆ 2016 ರಲ್ಲಿ, ಅಂದರೆ ತನಗೆ 13 ವರ್ಷವಾಗಿದ್ದಾಗ ಮೊದಲ ಬಾರಿಗೆ ಲೈಂಗಿಕ ದೌರ್ಜನ್ಯ ನಡೆದಿತ್ತು. ನಂತರ, ಒಂದೇ ವರ್ಷದಲ್ಲಿ ಮತ್ತೊಮ್ಮೆ ಇಂತಹ ಕೃತ್ಯ ಮರುಕಳಿಸಿದೆ. ಎರಡನೇ ಘಟನೆ ನಂತರ ಸಂತ್ರಸ್ತೆಯನ್ನು ಬಾಲಗೃಹಕ್ಕೆ ರವಾನಿಸಲಾಗಿತ್ತು. ನಂತರ, ಕಳೆದ ವರ್ಷ ತಾಯಿ ಮತ್ತು ಸಹೋದರನೊಂದಿಗೆ ಕಳುಹಿಸಿಕೊಡಲಾಗಿತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿ ಮೊಹಮ್ಮದ್ ಹನೀಫಾ ಅವರು, ಸಂತ್ರಸ್ತೆ ವರ್ಷದ ಹಿಂದೆ ಬಾಲಗೃಹದಿಂದ ಬಿಡಗಡೆಯಾದ ನಂತರ ಕೆಲಕಾಲ ಕಾಣೆಯಾಗಿದ್ದರು. ನಂತರ, ಡಿಸೆಂಬರ್‌ನಲ್ಲಿ ಪಾಲಕ್ಕಾಡ್‌ನಲ್ಲಿ ಪತ್ತೆಯಾಗಿದ್ದರು. ಅಲ್ಲಿಂದ ನಿರ್ಭಯ ಕೇಂದ್ರಕ್ಕೆ ತರಲಾಗಿತ್ತು ಎಂದು ಹೇಳಿದ್ದಾರೆ.
ಇನ್ನು ಅತ್ಯಾಚಾರ ಮತ್ತು ಲೈಂಗಿಕ ಶೋಷಣೆಯಡಿಯಲ್ಲಿ ಪೊಲೀಸರು ಒಟ್ಟು 44 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದು, ಈ ಪೈಕಿ 20 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಪೊಲೀಸರು, ಬಹುತೇಕ ಎಲ್ಲ ಆರೋಪಿಗಳನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಬಂಧಿತರು ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.