Connect with us

    LATEST NEWS

    ಕೊಯಿಕ್ಕೋಡ್ ವಿಮಾನ ದುರಂತ ಮೃತರ ಸಂಖ್ಯೆ 15ಕ್ಕೆ ಏರಿಕೆ

    ಕೊಯಿಕ್ಕೋಡ್ ಅಗಸ್ಟ್ 7: ದುಬೈ–ಕೋಯಿಕ್ಕೋಡ್‌ ನಡುವಿನ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ (ಐಎಕ್ಸ್‌–1344 B737) ಕೇರಳದ ಕೋಯಿಕ್ಕೋಡ್‌ನ ಕರಿಪುರ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಸಂದರ್ಭ ಅವಘಡಕ್ಕೀಡಾಗಿದೆ. ಘಟನೆಯಲ್ಲಿ 15 ಮಂದಿ ಮೃತಪಟ್ಟಿದ್ದು, 123 ಮಂದಿಗೆ ಗಾಯಗಳಾಗಿವೆ. 15 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ ಎಂದು ಮಲಪುರಂ ಎಸ್‌ಪಿ ತಿಳಿಸಿದ್ದಾರೆ.


    ರಾತ್ರಿ 7.45ರ ಸುಮಾರಿಗೆ ಈ ಅಪಘಾತ ಸಂಭವಿಸಿದೆ ಎಂದು ಕೊಂಡೋಟ್ಟಿ ಪೊಲೀಸರು ತಿಳಿಸಿದ್ದಾರೆ. ವಿಮಾನದಲ್ಲಿ ಒಟ್ಟು 190 ಇದ್ದರು. ಇಬ್ಬರು ಪೈಲಟ್‌ಗಳು, ನಾಲ್ವರು ಸಿಬ್ಬಂದಿ, 174 ಪ್ರಯಾಣಿಕರ ಜತೆ 10 ಮಕ್ಕಳು ಇದ್ದರು ಎಂದು ಡಿಜಿಸಿಎ ಮಾಹಿತಿ ನೀಡಿದೆ ಮೃತ 15 ಜನರಲ್ಲಿ ಪೈಲಟ್ ಕೂಡ ಒಬ್ಬರಾಗಿದ್ದು, ಅವರನ್ನು ದೀಪಕ್ ವಿ ಸಾಠೆ ಎಂದು ಗುರುತಿಸಲಾಗಿದೆ. ಅವರು ವಿಮಾನ ಹಾರಾಟದಲ್ಲಿ ಅನುಭವಿಯಾಗಿದ್ದರು. ಅಲ್ಲದೇ, ಭಾರತೀಯ ವಾಯುಪಡೆಯಲ್ಲೂ ಅವರು ಕಾರ್ಯನಿರ್ವಹಿಸಿದ್ದರು. ಸದ್ಯ ದುರಂತಕ್ಕೀಡಾಗಿರುವ ವಿಮಾನವು ವಂದೇ ಭಾರತ್‌ ಮಿಷನ್‌ ಅಡಿಯಲ್ಲಿ ದುಬೈನಿಂದ ಭಾರತಕ್ಕೆ ಪ್ರಯಾಣಿಕರನ್ನು ಕರೆ ತರುತ್ತಿತ್ತು.


    ದುಬೈನಿಂದ ಕೋಯಿಕ್ಕೋಡ್‌ಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ(ಎಎಕ್ಸ್‌ಬಿ 1344, ಬಿ 737) 10ನೇ ರನ್‌ವೇಗೆ ಇಳಿದ ನಂತರ ಚಲಿಸುವುದನ್ನು ಮುಂದುವರೆಸಿದೆ. ರೇನ್‌ವೇ ಅಂತ್ಯಕ್ಕೆ ಬಂದಾಗ ಭಾರಿ ಮಳೆಯ ಕಾರಣ ಕಣಿವೆಯಲ್ಲಿ ಕೆಳಗೆ ಬಿದ್ದು ಎರಡು ತುಂಡುಗಳಾಗಿ ಒಡೆದಿದೆ ಎಂದು ಡಿಜಿಸಿಎ ತಿಳಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply