Connect with us

LATEST NEWS

ದಕ್ಷಿಣಕನ್ನಡ ಜಿಲ್ಲೆಯಲ್ಲಿ 149 ಕೊರೊನಾ ಪ್ರಕರಣ 5 ಸಾವು

ಮಂಗಳೂರು ಜುಲೈ21: ಲಾಕ್ ಡೌನ್ ನ 6 ನೇ ದಿನದಲ್ಲಿರುವ ದಕ್ಷಿಣಕನ್ನಡದಲ್ಲಿ ಕೊರೊನಾ ಪ್ರಕರಣದಲ್ಲಿ ಯಾವುದೇ ಇಳಿಕೆ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಇಂದು ಮತ್ತೆ 149 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು ಜಿಲ್ಲೆಯಲ್ಲಿ 5 ಮಂದಿ ಕೊರೊನಾದಿಂದ ಪ್ರಾಣ ಕಳೆದುಕೊಂಡಿದ್ದಾರೆ. ಇದರೊಂದಿಗೆ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 87 ಕ್ಕೆ ಏರಿಕೆಯಾಗಿದೆ. ಇಂದಿನ 149  ಪ್ರಕರಣಗಳೊಂದಿಗೆ ದಕ್ಷಿಣಕನ್ನಡದಲ್ಲಿ ಒಟ್ಟು ಸೊಂಕಿತರ ಸಂಖ್ಯೆ 3834 ಕ್ಕೆ ಏರಿಕೆಯಾಗಿದೆ.

ಇಂದು ದಾಖಲಾದ ಪ್ರಕರಣಗಳಲ್ಲಿ ಪ್ರಾಥಮಿಕ ಸಂಪರ್ಕದಿಂದ 23, ILI – 67, SARI -22, ವಿದೇಶ ಪ್ರಯಾಣ – 1, ಸಂಪರ್ಕ ಪತ್ತೆ ಹಚ್ಚಲಾಗುತ್ತಿರುವ -15 ಪ್ರಕರಣಗಳು ಇವೆ. ಇಂದು ಜಿಲ್ಲೆಯಲ್ಲಿ 127 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲೆಯಲ್ಲಿ 2070 ಸಕ್ರಿಯ ಕೊರೊನಾ ಪ್ರಕರಣಗಳಿದ್ದು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಜಿಲ್ಲೆಯಲ್ಲಿ 5 ಮಂದಿ ಕೊರೊನಾದಿಂದಾಗಿ ಪ್ರಾಣ ಕಳೆದುಕೊಂಡಿದ್ದು, ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 87  ಕ್ಕೆ ಏರಿಕೆಯಾಗಿದೆ.

Facebook Comments

comments