Connect with us

    LATEST NEWS

    ಮಾರ್ಚ್ ನಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ

    ಮಾರ್ಚ್ ನಲ್ಲಿ ಬರೋಬ್ಬರಿ 14 ದಿನ ಬ್ಯಾಂಕ್ ರಜೆ

    ಬೆಂಗಳೂರು:ಆರ್ಥಿಕ ವರ್ಷದ ಕೊನೆಯ ತಿಂಗಳಾಗಿರುವ ಮಾರ್ಚ್ ನಲ್ಲಿ ಬ್ಯಾಂಕ್ ಗಳಿಗೆ ಬರೋಬ್ಬರಿ 14 ದಿನ ರಜೆ ಸಿಗಲಿದ್ದು, ಬ್ಯಾಂಕ್ ಗ್ರಾಹಕರಿಗೆ ದೊಡ್ಡ ಹೊಡೆತವೇ ಬೀಳಲಿದೆ.

    ಮಾರ್ಚ್ ತಿಂಗಳಲ್ಲಿ ಅಂದರೆ ಮುಂದಿನ ತಿಂಗಳು ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಮೂರು ದಿನ ಬ್ಯಾಂಕ್ ಮುಷ್ಕರ ಇರಲಿದೆ. ಮಾರ್ಚ್ 11 ರಿಂದ 13 ರವರೆಗೆ ಬ್ಯಾಂಕ್ ಮುಷ್ಕರ ಇದೆ. ಮತ್ತೆ ಹೋಳಿ, ಯುಗಾದಿ ಹಬ್ಬ ಮತ್ತು ಎರಡನೇ ಶನಿವಾರ ಮತ್ತು ಭಾನುವಾರ ಸೇರಿ 14 ದಿನ ಬ್ಯಾಂಕ್ ಸೇವೆ ಇರಲ್ಲ. ಹೀಗಾಗಿ ಬ್ಯಾಂಕ್ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ.

    ಬ್ಯಾಂಕ್ ರಜೆ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ಹಣದ ಸಮಸ್ಯೆ ಕೂಡ ಎದುರಾಗಲಿದೆ. ಆದ್ದರಿಂದ ಮಾರ್ಚ್ ತಿಂಗಳಲ್ಲಿ ಸಾರ್ವಜನಿಕರು ಬ್ಯಾಂಕ್ ಸೇವೆ ಮಾಡುವುದಕ್ಕೂ ಮುಂಚೆ ಯೋಚನೆ ಮಾಡಬೇಕಾದ ಸನ್ನಿವೇಶ ಎದುರಾಗಿದೆ.

    ಮಾರ್ಚ್ ತಿಂಗಳಲ್ಲಿ 14 ದಿನಗಳ ಬ್ಯಾಂಕ ರಜೆಯ ಡಿಟೈಲ್ಸ್

    * ಮಾರ್ಚ್ 1 – ಭಾನುವಾರ
    * ಮಾರ್ಚ್ 8 – ಭಾನುವಾರ
    * ಮಾರ್ಚ್ 9 ಮತ್ತು 10 – ಹೋಳಿ
    * ಮಾರ್ಚ್ 11, 12 ಮತ್ತು 13 – ಬ್ಯಾಂಕ್ ಮುಷ್ಕರ
    * ಮಾರ್ಚ್ 14 – ಎರಡನೇ ಶನಿವಾರ
    * ಮಾರ್ಚ್ 15 – ಭಾನುವಾರ
    * ಮಾರ್ಚ್ 22 – ಭಾನುವಾರ
    * ಮಾರ್ಚ್ 25 – ಯುಗಾದಿ
    * ಮಾರ್ಚ್ 28 – ನಾಲ್ಕನೇ ಶನಿವಾರ
    * ಮಾರ್ಚ್ 31 – ಆರ್ಥಿಕ ವರ್ಷದ ಕಡೆ ದಿನ

    Share Information
    Advertisement
    Click to comment

    You must be logged in to post a comment Login

    Leave a Reply