Connect with us

    KARNATAKA

    ಕೊಡಗು – ಹೃದಯಾಘಾತದಿಂದ 6ನೇ ತರಗತಿ ಬಾಲಕ ಸಾವು…!!

    ಕೊಡಗು ಜನವರಿ 08: 6ನೇ ತರಗತಿ ಬಾಲಕನೊಬ್ಬ ಹೃದಯಾಘಾತದಿಂದ ನಿಧನರಾಗಿರುವ ಘಟನೆ ಕೊಡಗು ಜಿಲ್ಲೆಯ ಕುಶಾಲನಗರ ತಾಲೂಕಿನ ಕೂಡುಮಂಗಳೂರು ಗ್ರಾಮದಲ್ಲಿ ನಡೆದಿದೆ.


    ಮೃತ ಬಾಲಕನನ್ನು ಕೀರ್ತನ್ (12) ಎಂದು ಗುರುತಿಸಲಾಗಿದ್ದು. ಕೀರ್ತನ್ ಕುಶಾಲನಗರ ಸಮೀಪದ ಕೊಪ್ಪಭಾರತ ಮಾತಾ ಶಾಲಾ ವಿದ್ಯಾರ್ಥಿಯಾಗಿದ್ದ. ಕೀರ್ತನ್‌ ಓದುತ್ತಿದ್ದ ಅದೇ ಶಾಲೆಯಲ್ಲೇ ಬಸ್ ಚಾಲಕನಾಗಿ ತಂದೆ ಮಂಜಾಚಾರಿ ಕರ್ತವ್ಯ ನಿರ್ವಹಿಸುತ್ತಿದ್ದರು.
    ಶನಿವಾರ ತಡರಾತ್ರಿ ಕೀರ್ತನ್ ಮಲಗಿದ್ದ ಜಾಗದಿಂದಲೇ ಎರಡು ಬಾರಿ ಎದೆ ನೋವು ಎಂದು ಕಿರುಚಿಕೊಂಡಿದ್ದ. ಇದರಿಂದಾಗಿ ಗಾಬರಿಗೊಂಡ ಆತನ ಪೋಷಕರು ತಕ್ಷಣವೇ ಕುಶಾಲನಗರ ಆಸ್ಪತ್ರೆ ಕರೆದೊಯ್ದಿದ್ದಾರೆ. ಆದರೆ ಕೀರ್ತನ್‌ ಆ ವೇಳೆಗೆ ಮೃತಪಟ್ಟಿದ್ದ.

    ಒಟ್ಟಿನಲ್ಲಿ ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಅದರಲ್ಲೂ ಪುಟ್ಟ ಮಕ್ಕಳು ಹೃದಯಾಘಾತದಿಂದ ಮೃತಪಡುವ ನಿದರ್ಶನ ಇತ್ತೀಚಿನ ದಿನಗಳಲ್ಲಿ ಆತಂಕಕ್ಕೆ ಕಾರಣವಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply