LATEST NEWS
ತಲಪಾಡಿ ಗಡಿಯಲ್ಲಿ 108 ಕಿಲೋ ಗಾಂಜಾ ಸಾಗಾಟ ಪತ್ತೆ
ಮಂಗಳೂರು, ಜುಲೈ 21 : ಮಂಗಳೂರಿನಿಂದ ಕೇರಳದ ಕಾಸರಗೋಡಿನತ್ತ ತೆರಳುತ್ತಿದ್ದ ಪಿಕಪ್ ವಾಹನದಲ್ಲಿ ಭಾರೀ ಪ್ರಮಾಣದ ಗಾಂಜಾ ಸಾಗಾಟ ಪತ್ತೆಯಾಗಿದ್ದು ಮಂಜೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ತಲಪಾಡಿ ಗಡಿಭಾಗದ ಮುಖ್ಯ ರಸ್ತೆಯನ್ನು ತಪ್ಪಿಸಿಕೊಂಡು ಒಳದಾರಿಯಿಂದ ಸಾಗಿದ್ದ ಪಿಕಪ್ ವಾಹನ ಕೇರಳದತ್ತ ಸಾಗುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದೆ. ಒಳದಾರಿಯಿಂದ ಪೊಲೀಸರ ಕಣ್ತಪ್ಪಿಸಿಕೊಂಡು ಸಾಗುತ್ತಿದ್ದ ವಾಹನವನ್ನು ಕುಂಜತ್ತೂರು ಬಳಿ ಸಾರ್ವಜನಿಕರು ಸೇರಿ ಅಡ್ಡ ಹಾಕಿದ್ದಾರೆ.
ಪೊಲೀಸರು ಬಂದು ತಪಾಸಣೆ ನಡೆಸಿದಾಗ, ವಾಹನದಲ್ಲಿ 50ಕ್ಕೂ ಹೆಚ್ಚು ಚೀಲಗಳಲ್ಲಿ ತುಂಬಿಸಿಟ್ಟಿದ್ದ ಗಾಂಜಾ ಪತ್ತೆಯಾಗಿದೆ. ಒಟ್ಟು 108 ಕೇಜಿ ಗಾಂಜಾ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದರ ಮೌಲ್ಯ ಸುಮಾರು 15 ಲಕ್ಷ ಆಗಬಹುದು ಎನ್ನಲಾಗ್ತಿದೆ. ಇಷ್ಟು ದೊಡ್ಡ ಪ್ರಮಾಣದ ಗಾಂಜಾವನ್ನು ಎಲ್ಲಿಂದ ಮತ್ತು ಎಲ್ಲಿಗೆ ಸಾಗಾಟ ಮಾಡಲಾಗುತ್ತಿತ್ತು ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಪಿಕಪ್ ಚಾಲಕನನ್ನು ಬಂಧಿಸಲಾಗಿದೆ.
Facebook Comments
You may like
-
ಪುತ್ತೂರು ಅಕ್ರಮ ಗಾಂಜಾ ಸಾಗಾಟಕ್ಕೆ ಯತ್ನ – 40 ಸಾವಿರ ಮೌಲ್ಯದ ಗಾಂಜಾ ವಶಕ್ಕೆ ಪಡೆದ ಪೊಲೀಸರು
-
ಗಾಂಜಾ ಮಾರಾಟಕ್ಕೆ ಯತ್ನ ಮೂವರು ಆರೋಪಿಗಳ ಬಂಧನ
-
ಗೋವಾದಲ್ಲಿ ಗಾಂಜಾ ಬೆಳೆಯಲು ಷರತ್ತುಬದ್ದ ಅನುಮತಿ ನೀಡಲು ನಿರ್ಧರಿಸಿದ ಬಿಜೆಪಿ ಸರಕಾರ
-
ಗಾಂಜಾ ಇನ್ನು ಮುಂದೆ ಅಪಾಯಕಾರಿ ಮಾದಕ ವಸ್ತುವಲ್ಲ – ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತ ಬೆಂಬಲ
-
ಪುತ್ತೂರು ಗಾಂಜಾ ಮಾರಾಟಕ್ಕೆ ಯತ್ನ 4 ಆರೋಪಿಗಳ ಬಂಧನ
-
ಮಂಗಳೂರು ಪೊಲೀಸರ ಕಾರ್ಯಾಚರಣೆ – 24 ಕೆಜಿ ಗಾಂಜಾ ಸಾಗಾಟಕ್ಕೆ ಯತ್ನಿಸಿದ ಇಬ್ಬರ ಬಂಧನ
You must be logged in to post a comment Login