MANGALORE
ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕೊರೊನಾಗೆ 10ನೇ ಬಲಿ
ಮಂಗಳೂರು ಜೂನ್ 24: ಮಂಗಳೂರಿನಲ್ಲಿ ಕೊರೊನಾ ಮತ್ತೊಂದು ಬಲಿಯಾಗಿದ್ದು, ನಿನ್ನೆಯಷ್ಟೇ ಕೋವಿಡ್ ಸೋಂಕು ದೃಢ ಪಟ್ಟ ಹಿನ್ನೆಲೆಯಲ್ಲಿ ಉಳ್ಳಾಲ ಅಝಾದ್‍ನಗರದ ಮಹಿಳೆಯೊಬ್ಬರು ಇಂದು ಮೃತಪಟ್ಟಿದ್ದಾರೆ ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾದಿಂದ ಬಲಿಯಾದವರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.
ಉಳ್ಳಾಲ ಅಝಾದ್‍ನಗರದ 66ರ ಹರೆಯದ ಮಹಿಳೆಗೆ 10 ದಿನಗಳ ಹಿಂದೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಎಂಟು ದಿನಗಳ ಕಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗೆ ಎರಡು ದಿನಗಳ ಹಿಂದೆ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ದಾಖಲಾದ ಸಂದರ್ಭದಲ್ಲಿ ಮಹಿಳೆಯ ಗಂಟಲುದ್ರವ ಪರೀಕ್ಷೆ ತೆಗೆದುಕೊಂಡಿದ್ದು ಮಂಗಳವಾರ ದ್ರವ ಪರೀಕ್ಷೆಯಲ್ಲಿ ಪಾಸಿಟಿವ್ ಬಂದ ಹಿನ್ನಲೆಯಲ್ಲಿ ಮಹಿಳೆಯನ್ನು ನಗರದ ವೆನ್‍ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಇಂದು ಮಹಿಳೆ ಕೋವಿಡ್ ಸೋಂಕಿಗೆ ಬಲಿಯಾಗಿದ್ದಾರೆ, ಈ ಕುರಿತು ಅರೋಗ್ಯ ಇಲಾಖೆಯು ಸ್ಪಷ್ಟ ಪಡಿಸಿದೆ.
ಮಹಿಳೆ ಮನೆ ಬಿಟ್ಟು ಎಲ್ಲೂ ಹೊರಗೆ ಹೋಗಿಲ್ಲ, ಮನೆಯಲ್ಲಿರುವವರು ಯಾರೂ ಹೊರಗಿನಿಂದ ಬಂದಿಲ್ಲ ಆದರೆ ಮಹಿಳೆಗೆ ಸೋಂಕು ಹೇಗೆ ತಗುಲಿದೆ ಎನ್ನುವುದೇ ನಿಗೂಢವಾಗಿದೆ.
Facebook Comments
You may like
ರ್ಯಾಗಿಂಗ್ ಪ್ರಶ್ನಿಸಿದ ಪ್ರಿನ್ಸಿಪಾಲ್ ಗೆ ಹಲ್ಲೆ ನಡೆಸಿದ ವಿಧ್ಯಾರ್ಥಿಗಳು…!!
ಸತ್ತು 8 ತಿಂಗಳುಗಳ ಬಳಿಕ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ
ಕೊಣಾಜೆ – ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರುಗಳಿಗೆ ಕಲ್ಲು ತೂರಾಟ
ಮಂಗಳೂರು ಮೇಯರ್ ಆಗಿ ಪ್ರೇಮಾನಂದ ಶೆಟ್ಟಿ.. ಸುಮಂಗಲಾ ರಾವ್ ಉಪ ಮೇಯರ್
ಮದುವೆ ಸಂಭ್ರಮ ಮಗಿಯುವ ಮೊದಲೆ ಹೃದಯಾಘಾತಕ್ಕೆ ಬಲಿಯಾದ ನವವಧು
ಕಾಡಾನೆ ಜೊತೆ ಸೆಲ್ಫಿ ತೆಗೆದುಕೊಳ್ಳಲು ಹೋದಾ ಯುವಕ ಅಪ್ಪಚ್ಚಿ!
You must be logged in to post a comment Login