Connect with us

    DAKSHINA KANNADA

    ಹಳೆನೇರಂಕಿಯಲ್ಲಿ ದೂಪದ ಮರಗಳು ಲಗಾಡಿ, ಸುಡುತ್ತಿವೆ ಕಾಂಗ್ರೇಸ್ ಮುಖಂಡನ ಬೆಂಕಿಕಡ್ಡಿ….

    ಹಳೆನೇರಂಕಿಯಲ್ಲಿ ದೂಪದ ಮರಗಳು ಲಗಾಡಿ, ಸುಡುತ್ತಿವೆ ಕಾಂಗ್ರೇಸ್ ಮುಖಂಡನ ಬೆಂಕಿಕಡ್ಡಿ….

    ಪುತ್ತೂರು,ಜನವರಿ 12:ಪುತ್ತೂರು ತಾಲೂಕಿನ ಹಳೆನೇರಂಕಿ ಗ್ರಾಮದ ಸರಕಾರಿ ಜಾಗದಲ್ಲಿ ಅರಣ್ಯ ಇಲಾಖೆ ನೆಟ್ಟು ಬೆಳೆಸಿದ ಧೂಪದ ಮರಗಳು ಇತ್ತೀಚಿನ ದಿನಗಳಲ್ಲಿ ಮಾಯವಾಗುತ್ತಿವೆ.

    ನಿನ್ನೆ ರಾತ್ರಿ ನೋಡಿದ ಮರ ಮರುದಿನ ಬೆಳಿಗ್ಗೆ ನೋಡಿದಾಗ ಬುಡ ಸಮೇತ ನಾಪತ್ತೆಯಾಗುತ್ತಿರುವುದು ಸ್ಥಳೀಯರ ಆತಂಕಕ್ಕೂ ಕಾರಣವಾಗಿದೆ.

    ಈ ರೀತಿ ಧೂಪದ ಮರಗಳು ಮಾಯವಾಗಲು ಯಾವುದಾದರೂ ಅಘೋಚರ ಶಕ್ತಿ ಏನಾದರೂ ಗ್ರಾಮದಲ್ಲಿ ಉದ್ಭವವಾಗಿದೆಯೇ ಎನ್ನುವ ಹೆದರಿಕೆಯಲ್ಲೇ ಈ ಊರಿನ ಜನರಿದ್ದರು.

    ಆದರೆ ಊರಿನ ಕೆಲವು ಯುವಕರು ಈ ಮರದ ರಹಸ್ಯವನ್ನು ಭೇಧಿಸಬೇಕು ಎನ್ನುವ ನಿಟ್ಟಿನಲ್ಲಿ ರಾತ್ರಿ ಹೊತ್ತು ಕಣ್ಣಿಗೆ ಎಣ್ಣೆ ಹಚ್ಚಿ ಕಾದಾಗಲೇ ಅವರಿಗೆ ಆ ಅಘೋಚರ ಶಕ್ತಿಯ ವಿಷಯ ತಿಳಿದುಬಂದಿದೆ.

    ಊರಿನ ಕಾಂಗ್ರೇಸ್ ಕಾರ್ಯಕರ್ತ ಹಾಗೂ ಅರಣ್ಯ ಸಚಿವ ಹಾಗೂ ಗೃಹಸಚಿವರೊಂದಿಗೆ ನಿಕಟ ಸಂಬಂಧ ಹೊಂದಿರುವ ಗಣೇಶ್ ಹಿರಿಂಜ ಈ ಮರಗಳು ಮಾಯವಾಗುವ ಹಿಂದಿನ ಶಕ್ತಿಯಾಗಿದ್ದಾರೆ.

    ವರ್ಷಗಳ ಹಿಂದೆ ಬಿಜೆಪಿ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ಈತ ಕಾಂಗ್ರೇಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾನೆ. ಗಾಳಿ ಬಂದಲ್ಲಿ ವಾಲುವುದು ಎನ್ನುವ ಜಾತಿಗೆ ಸೇರಿರುವ ಈತ ಅಧಿಕಾರವಿದ್ದವರ ಬಳಿ ತಾನಾಗಿಯೇ ಸೇರಿಕೊಳ್ಳುತ್ತಿದ್ದಾರೆ ಎನ್ನುವ ಮಾತುಗಳೂ ಸ್ಥಳೀಯರಿಂದ ಕೇಳಿ ಬರುತ್ತಿದೆ.

    ಹಳೆನೇರಂಕಿ ಗ್ರಾಮದಲ್ಲಿ ತನ್ನ ಒಡೆತನದ ಅನ್ನಪೂರ್ಣೇಶ್ವರಿ ಎಂಟರ್ ಪ್ರೈಸಸ್ ಎನ್ನುವ ಬೆಂಕಿಕಡ್ಡಿ ತಯಾರಿಕಾ ಘಟಕವನ್ನು ಆರಂಭಿಸಿರುವ ಗಣೇಶ್ ಕೇವಲ ಸರಕಾರಿ ಜಾಗ ಮಾತ್ರವಲ್ಲ, ಇತರರ ವರ್ಗ ಜಾಗದಲ್ಲೂ ಇರುವ ಧೂಪದ ಮರಗಳನ್ನು ಕಡಿದು ತನ್ನ ಕಂಪನಿಯನ್ನು ಕಟ್ಟಲು ಆರಂಭಿಸಿದ್ದಾರೆ ಎನ್ನುವ ಆರೋಪ ಸ್ಥಳೀಯರದ್ದಾಗಿದೆ.

    ಇದೇ ವಿಚಾರವಾಗಿ ಇಲ್ಲಿ ಗಣೇಶ್ ಹಿರಿಂಜ ಸಹವರ್ತಿ ತಿಮ್ಮಪ್ಪ ಗೌಡ ಎನ್ನುವ ವ್ಯಕ್ತಿ ಅಕ್ರಮವಾಗಿ ಕಡಿದ ಮರವನ್ನು ತನ್ನ ಜಮೀನು ಮೂಲಕ ಸಾಗಾಟ ಮಾಡುವುದನ್ನು ತಡೆದ ಆನಂದ ಎಂಬವರ ಮೇಲೆ ಕೊಲೆ ಬೆದರಿಕೆಯನ್ನೂ ಹಾಕಲಾಗಿದೆ.

    ಈ ಸಂಬಂಧ ಕಡಬ ಪೋಲೀಸ್ ಠಾಣೆಯಲ್ಲಿ ದೂರ ನೀಡಲಾಗಿದ್ದು, ಬಳಿಕ ಪೋಲೀಸರು ಆರೋಪಿಯಿಂದ ಮುಚ್ಚಳಿಕೆ ಪಡೆದು ಹಿಂದೆ ಕಳುಹಿಸಿದ್ದಾರೆ.

    ಹಳೆನೇರಂಕಿ ಗ್ರಾಮದಲ್ಲಿ ಇದೀಗ ಯಾರ ಮನೆಯಲ್ಲೂ, ಸರಕಾರಿ ಜಾಗದಲ್ಲೂ ಧೂಪದ ಮರವಿದ್ದರೆ ಅದು ಗಣೇಶ್ ಹಿರಿಂಜ ಅವರ ಬೆಂಕಿಕಡ್ಡಿ ಘಟಕಕ್ಕೆ ಸೇರಿದ್ದು ಹಾಗೂ ಸೇರಬೇಕು ಎನ್ನುವ ಮಟ್ಟಿಗೆ ಇಲ್ಲಿ ದಾದಾಗಿರಿ ನಡೆಯುತ್ತಿದೆ ಎನ್ನುವುದು ಸ್ಥಳೀಯರ ಅಳುಕಾಗಿದೆ.

    ಅಕ್ರಮವಾಗಿ ಧೂಪದ ಮರಳನ್ನು ಕಡಿಯಲಾಗುತ್ತಿದೆ ಎಂದು ಗ್ರಾಮಸ್ಥರು ಪಂಜ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದರೂ, ಅಧಿಕಾರಿಗಳು ರೈಡ್ ಎನ್ನುವ ಡ್ರಾಮಾ ಮಾಡುತ್ತಿದ್ದಾರೆ ಎನ್ನುವ ಆರೋಪ ಗ್ರಾಮಸ್ಥರದ್ದಾಗಿದೆ.

    ತನ್ನ ಪವರ್ ಅನ್ನು ತೋರಿಸುವುದಕ್ಕೋಸ್ಕರ ಈತ ಪೋಲೀಸ್, ಅರಣ್ಯ, ಕಂದಾಯ ಹೀಗೆ ತನಗೆ ಬೇಕಾದ ಇಲಾಖೆಯ ಅಧಿಕಾರಿಗಳನ್ನು ಮನೆಗೆ ಕರೆಸಿ ಕುಶಲೋಪಚಾರ ಮಾಡುತ್ತಿರುವ ವಿಚಾರವೂ ಇದೀಗ ಬಹಿರಂಗವಾಗಿದೆ.

    ಎಲ್ಲಾ ಅಧಿಕಾರಿಗಳೂ ಈ ವ್ಯಕ್ತಿಯ ಹಿಂದೆ ಇರುವುದನ್ನು ಮನಗಂಡ ಗ್ರಾಮಸ್ಥರು ಯಾರಿಗೆ ಹೇಳಲಿ ನಮ್ಮ ಪ್ರಾಬ್ಲಮ್ಮು ಎಂದು ತಲೆ ಮೇಲೆ ಕೈಯಿಟ್ಟು ಕುಳಿತಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply