LATEST NEWS
ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟಕ್ಕೆ ಎಸ್ ಡಿ ಪಿ ಐ ಕರೆ
ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟಕ್ಕೆ ಎಸ್ ಡಿ ಪಿ ಐ ಕರೆ
ಮಂಗಳೂರು, ಫೆಬ್ರವರಿ 04: ಸುಳ್ಳು ಪ್ರಕರಣ ದಾಖಲಿಸಿದ್ದನ್ನು ಹಿಂಪಡೆಯದಿದ್ದರೆ ಉಗ್ರ ಹೋರಾಟ ನಡೆಸುವುದಾಗಿ ಎಸ್‌ಡಿಪಿಐ ಎಚ್ಚರಿಸಿದೆ. ಎಸ್ ಡಿಪಿಐ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಾಹುಲ್ ಹಮೀದ್ ಅವರು ಈ ಹೇಳಿಕೆಯನ್ನು ನೀಡಿದ್ದಾರೆ.
ದಕ್ಷಿಣ ಕನ್ನಡದ ಪೊಲೀಸ್ ಇಲಾಖೆ ವಿರುದ್ಧವಾಗಿ ಸ್ವಯಂ ಪ್ರೇರಿತವಾಗಿ ಜಿಲ್ಲಾಧ್ಯಕ್ಷರ ಮತ್ತು ಇತರರ ಮೇಲೆ ಸುಳ್ಳು ಪ್ರಕರಣ ದಾಖಲಿಸಿ ಜಿಲ್ಲೆಯಲ್ಲಿ ದ್ವೇಷವನ್ನು ಹರಡಿಸುವಂತಹ ಶಾಂತಿ ಕೆಡಿಸುವಂತಹ ಕೆಲಸದಲ್ಲಿ ನಿರತವಾಗಿದೆ ಎಂದು ಆರೋಪಿದ ಅವರು ಪೊಲೀಸ್ ಇಲಾಖೆಯ ಈ ರೀತಿಯ ಕ್ರಮವನ್ನು ಎಸ್ ಡಿ ಪಿ ಐ. ದ.ಕ ಜಿಲ್ಲಾ ಸಮಿತಿಯು ತೀವ್ರವಾಗಿ ಖಂಡಿಸುತ್ತದೆ.
ಹಿಂದೂ ರಾಷ್ಟ್ರ ನಿರ್ಮಾಣಕ್ಕಾಗಿ ಸಂವಿಧಾನ ವಿರುದ್ಧವಾಗಿ ಕಾರ್ಯಕ್ರಮ ಅಯೋಜಿಸಲು ಮಂಗಳೂರಿನಾದ್ಯಂತ ಪ್ರಚಾರಪಡಿಸಿದಾಗ, ಸ್ವಯಂ ಪ್ರೇರಿತವಾಗಿ ಕೇಸು ದಾಖಲಿಸಲು ಸಾಧ್ಯವಾಗದೇ ಮೌನಕ್ಕೆ ಶರಣಾದ ಪೊಲೀಸರು ಸತ್ಯವನ್ನು ಜನತೆಗೆ ತಿಳಿಸಲು ಹೊರಟಾಗ ಈ ರೀತಿಯ ಕ್ರಮ ತೆಗೆಯುವುದರಿಂದ ಪೊಲೀಸರ ನಡೆಯ ಬಗ್ಗೆ ಸಂಶಯಗಳು ವ್ಯಕ್ತವಾಗುತ್ತಿದೆ
ಮತ್ತು ತಾರತಮ್ಯ ನೀತಿಯು ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಬಾಬ್ರಿ ಮಸೀದಿ ಧ್ವಂಸ ವಿಷಯದ ವಿಚಾರವಾಗಿ ಎಸ್ ಡಿಪಿಐ ದೇಶದಾದ್ಯಂತ ಫೆಬ್ರವರಿ 1 ರಿಂದ 28 ರ ವರೆಗೆ ನಡೆಯಲಿರುವ “ಬಾಬರಿ ಮಸೀದಿ ಮರಳಿ ಪಡೆಯೋಣ, ಭಾರತವನ್ನು ಮರಳಿ ಗಳಿಸೋಣ” ಎಂಬ ರಾಷ್ಟ್ರೀಯ ಅಭಿಯಾನದ ರಾಜ್ಯ ಉದ್ಘಾಟನಾ ಕಾರ್ಯಕ್ರಮವು ಜಿಲ್ಲೆಯ ಉಳ್ಳಾಲದಲ್ಲಿ ನಡೆದಿದ್ದು ಈ ಕಾರ್ಯಕ್ರಮವು ಸಂವಿಧಾನ ಬದ್ಧವಾಗಿ ಬಹಳ ಅಚ್ಚುಕಟ್ಟಾಗಿ ನಡೆದಿದೆ.
ಮಾತ್ರವಲ್ಲದೆ ದೇಶಕ್ಕೆ ಆದಂತಹ ಅನ್ಯಾಯವನ್ನು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕಾದ ಅವಮಾನವನ್ನು ಜನತೆಗೆ ತಿಳಿಸಲು ಸಾಧ್ಯವಾಗಿದೆ.
ಆದುದರಿಂದ ಈ ಪ್ರಕರಣವನ್ನು ಹಿಂತೆಗೆಯದಿದ್ದಲ್ಲಿ ಜಿಲ್ಲಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಸ್ ಡಿ ಪಿ ಐ ಜಿಲ್ಲಾ ಪ್ರ.ಕಾರ್ಯದರ್ಶಿ ಶಾಹುಲ್ ಹಮೀದ್ ಎಚ್ಚರಿಸಿದರು.